ಗೋಕಾಕ:ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಯೋಗ ಅವಶ್ಯಕ: ಪ್ರೊ ಗಂಗಾಧರ ಮಳಗಿ
ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಯೋಗ ಅವಶ್ಯಕ: ಪ್ರೊ ಗಂಗಾಧರ ಮಳಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6:
ಭೌತಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದ್ದು, ದೈಹಿಕ ಮತ್ತು ಮಾನಸಿಕ ಪರಿವರ್ತನೆಗೆ ಯೋಗ ಅವಶ್ಯಕವೆಂದು ಇಲ್ಲಿನ ವಿಶ್ರಾಂತ ಪ್ರಾದ್ಯಪಕ ಪ್ರೊ ಗಂಗಾಧರ ಮಳಗಿ ಹೇಳಿದರು.
ಇತ್ತೀಚೆಗೆ ನಗರದ ಮಯೂರ ಶಾಲೆಯ ಸಭಾಂಗಣದಲ್ಲಿ ಗೋಕಾಕ ಪತಂಜಲಿ ಯೋಗ ಸಮಿತಿಯವರು ಹಮ್ಮಿಕೊಂಡು ವಿಶೇಷ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಭಾರತ ದೇಶ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಕ್ಯಾನ್ಸರ್ ನಂತಹ ಭೀಕರ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಯೋಗಕ್ಕೆ ಇದೆ. ಯೋಗವನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ಸದೃಢ ಆರೋಗ್ಯವಂತರಾಗಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಸ್ವಾಮಿಗಳು, ಬೆಳಗಾವಿ ಜಿಲ್ಲೆಯ ಪಂತಜಲಿ ಯೋಗ ಜಿಲ್ಲಾ ಪ್ರಭಾರಿ ಕಿರಣ ಮುನ್ನೋಲಕರ , ಡಾ.ಚಂದ್ರಶೇಖರ ಗುಗ್ಗವಾಡ, ತಾಲೂಕಾ ಪ್ರಭಾರಿ ನಿಜಲಿಂಗಪ್ಪ ಗಡ್ಡಿಮನಿ, ಯೋಗ ಶಿಕ್ಷಕ ಯಲ್ಲಪ್ಪ ಕುರುಬಗಟ್ಟಿ, ಶಿವಪುತ್ರ ಹೆಗ್ಗನವರ, ಸುನೀತಾ ತುರಾಯಿದಾರ, ಲಿಲಾವತಿ ಪಾಟೀಲ, ಪುಷ್ಪಾ ದೇಸಾಯಿ, ಮಂಜುಳಾ ದುಳಾಯಿ, ಗಿರೀಜಾ ದೊಡಮನಿ, ಜಯಶ್ರೀ ಮಳಗಿ , ಆರತಿ ಗುಗ್ಗವಾಡ ಇದ್ದರು.