ಗೋಕಾಕ:ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ : ಪ್ರಾಚಾರ್ಯ ಮಾದರ
ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ : ಪ್ರಾಚಾರ್ಯ ಮಾದರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :
ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ. ಇಂಥಹವರಿಗೆ ಸರಕಾರ ಅನೇಕ ಯೋಜನೆ ರೂಪಿಸಿದೆ. ಅವುಗಳು ಗ್ರಾಮೀಣ ಭಾಗದ ಪ್ರತಿಭಾನ್ವಿತರಿಗೆ ತಲುಪಬೇಕಿದೆ. ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಗೊಕಾಕ ಸಿದ್ಧಾರ್ಥ ಲಲಿತಕಲಾ ಕಾಲೇಜಿನ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು.
ಅವರು ಸಮೀಪದ ಶಿಂಗಳಾಪೂರ ಗ್ರಾಮದಲ್ಲಿಯ ಸಿರಿನಾಡು ಶಿಂಗಳಾಪೂರ ಜಾನಪದ ಕಲಾ ಸಂಘ ಉದ್ಘಾಟಿಸಿ ಮಾತನಾಡುತ್ತ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಲಾವಿದರ ಹಾಗೂ ಕಲೆಯ ಸಂರಕ್ಷಣೆಗಾಗಿ ಮಾಶಾಸನ,ಪ್ರಾಯೋಜನೆ ಕಾರ್ಯಕ್ರಮ ಹಾಗೂ ಧನ ಸಹಾಯ ಯೋಜನೆ ಮತ್ತೀತರ ಗೌರವ ಪ್ರಶಸ್ತಿಯಂತಹ ಅನೇಕ ಉಪಯೋಜನೆಗಳಿವೆ. ಅವುಗಳು ದೇಶಿಯ ಪ್ರತಿಭೆಗಳಿಗೆ ತಲುಪಲಿ ಎಂದು ಆಶಿಸಿದರು.
ವಿಶ್ವದಾಖಲೆಯ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ ಹಿರಿಯ ಹಾಮ್ರ್ರೋನಿಯಂ ಕಲಾವಿದ ಭೀಮಪ್ಪ ಜಾಧವ ಬಸಳಿಗುಂದಿಯ ಭಜನಾ ಕಲಾವಿದ ಸತ್ತೆಪ್ಪಾ ಹೊಸಮನಿ, ಶಿಂಗಳಾಪುರದ ದೊಡ್ಡಾಟ ಕಲಾವಿದ ಮುತ್ತೆಪ್ಪ ಹರಿಜನ ಅವರಿಗೆ ಜಾನಪದ ಕಲಾ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.
ನಾರಾಯಣಕೇರಿ ಶ್ರೀ ಸಿದ್ದಾರೂಢ ಮಠದ ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಗ್ರಾಮದ ಹಿರಿಯರಾದ ಶ್ರೀಶೈಲ ಕಂಬಿ ಅಧ್ಯಕ್ಷತೆವಹಿಸಿದ್ದರು. ಗುತ್ತಿಗೆದಾರ ಎಚ್.ಡಿ. ಮುಲ್ಲಾ ಲೋಳಸುರ ಗ್ರಾಮ ಪಂಚಾಯತ ಸದಸ್ಯರಾದ ರಸೀದಹ್ಮದ ಪಿರಜಾದೆ. ವಾಯಿದ ಪಿರಜಾದೆ. ಸುನಿತಾ ಹರಿಜನ ಶಕೀರಾಬೇಗಂ ಪಿರಜಾದೆ. ಮಾಜಿ ತಾಲೂಕಾ ಪಂಚಾಯತ ಸದಸ್ಯ ಮಾಯಪ್ಪಾ ಮುತ್ತೆಪ್ಪಗೋಳ ವೇದಿಕೆ ಮೇಲಿದ್ದರು.