RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಹಜರತ್‌ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿರಿ : ಜಾವೇದ್ ಗೋಕಾಕ

ಗೋಕಾಕ:ಹಜರತ್‌ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿರಿ : ಜಾವೇದ್ ಗೋಕಾಕ 

ಹಜರತ್‌ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿರಿ : ಜಾವೇದ್ ಗೋಕಾಕ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :

ಹಜರತ್‌ ಮಹಮ್ಮದ ಪೈಗಂಬರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುವುದ ರೊಂದಿಗೆ ಬದುಕು ಸಾರ್ಥಕತೆ ಪಡಿಸಿಕೊಳ್ಳಿ ಎಂದು ಅಂಜುಮನ್ ಏ ಇಸ್ಲಾಂ ಕಮೀಟಿಯ ಚೇರಮನ ಜಾವೇದ್ ಗೋಕಾಕ  ಹೇಳಿದರು

ಮಂಗಳವಾರದಂದು ನಗರದಲ್ಲಿ ಹಮ್ಮಿಕೊಂಡ ಹಜರತ ಮಹಮ್ಮದ ಪೈಗಂಬರ ಜಯಂತಿ ಅಂಗವಾಗಿ ಸಿಹಿ ವಿತರಿಸಿ,  ಅವರು ಮಾತನಾಡಿದರು.

ಕ್ರಿಶ 6 ನೇ ಶತಮಾನದಲ್ಲಿಪ್ರವಾದಿ ಪೈಗಂಬರ ಅವರು ತಮ್ಮದೇ ಆದ ಮೌಲ್ಯಗಳನ್ನು ಹುಟ್ಟು ಹಾಕಿ ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ . ಅಂತಹ ಮಹಾನ ಪುರುಷರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ನಾವೆಲ್ಲರೂ ಬಾಳಿ ಬದುಕಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಮುಖಂಡರುಗಳಾದ ಇಸ್ಮಾಯಿಲ್ ಜಮಾದಾರ, ಮಹಾಂತೇಶ ಗವಿಮಠ, ಸಲ್ಲಿಂ ಮುಲ್ಲಾ ಇಮ್ರಾಹಿಮ ಮುಲ್ಲಾ, ರಿಯಾಜ ಗೋಕಾಕ, ಖಲೀಲ್ ಗೋಕಾಕ,ಕಯ್ಯೂಮ ಖೈರದಿ, ದಾದಾಪೀರ ಗೋಕಾಕ,  ಯೂಸುಫ್ ಗೋಕಾಕ,ಶಂಶೋದ್ದೀನ ಚಾಂದಖಾನ , ಇಸ್ಮಾಯಿಲ್ ಮಲ್ಲಾಪೂರಿ, ನಿಯಾಜ ದೇಶನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: