RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ರಾಮಾಯಣ ಮಹಾಕಾವ್ಯವು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ : ಸನತ್ ಜಾರಕಿಹೊಳಿ

ಗೋಕಾಕ:ರಾಮಾಯಣ ಮಹಾಕಾವ್ಯವು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ : ಸನತ್ ಜಾರಕಿಹೊಳಿ 

ರಾಮಾಯಣ ಮಹಾಕಾವ್ಯವು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ : ಸನತ್ ಜಾರಕಿಹೊಳಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ, 20 :

 
ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯವು ಸರ್ವರಿಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ ಎಂದು ಇಲ್ಲಿಯ ಲಕ್ಷ್ಮೀ ಏಜ್ಯುಕೇಶನ್ ಟ್ರಸ್ಟ್‍ನ ವ್ಯವಸ್ಥಾಪನ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು.
ಅವರು ಬುಧವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೌಲ್ಯಯುತವಾದ ಬದುಕಿನ ಆದರ್ಶಗಳನ್ನು ರಾಮಾಯಣ ಗ್ರಂಥವು ಹೊಂದಿ ದೇಶದ ಪ್ರಥಮ ಗ್ರಂಥವಾಗಿ ವಾಲ್ಮೀಕಿ ಅವರನ್ನು ಆದಿ ಕವಿಯನ್ನಾಗಿಸಿದೆ. ಇವುಗಳ ಆದರ್ಶವನ್ನು ನಾವೆಲ್ಲರೂ ಆಚರಣೆಗೆ ತರುವುದರೊಂದಿಗೆ ಮುಂದಿನ ಪೀಳಿಗೆಯಲ್ಲೂ ಮೌಲ್ಯಗಳನ್ನು ಬೆಳೆಸಬೇಕು. ಬುದ್ಧ, ಬಸವ, ಅಂಬೇಡ್ಕರ ಅವರೂ ಸಹ ಮೌಲ್ಯಯುತವಾದ ಸಂದೇಶಗಳನ್ನೇ ನೀಡಿದ್ದು, ಅವಗಳನ್ನು ಎಲ್ಲ ಸಮಾಜದವರು ಅಳವಡಿಸಿಕೊಂಡು ಸುಸಂಸ್ಕøತ ಹಾಗೂ ಬಲಿಷ್ಠ ಭಾರತ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸದಸ್ಯ ಶಿವಪ್ಪ ಗುಡ್ಡಾಕಾರ, ಪೌರಾಯುಕ್ತ ಶಿವಾನಂದ ಹಿರೇಮಠ, ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯಣ್ಣವರ, ಬಿಇಓ ಜಿ.ಬಿಬಳಿಗಾರ, ಸಮಾಜ ಕಲ್ಯಾಣ ಅಧಿಕಾರಿ ಎಸ್.ವಿ.ಕಲ್ಲಪ್ಪನವರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಯಶ್ರೀ ಗೋಟೂರೆ, ಉಪನ್ಯಾಸಕ ವಾಯ್.ಬಿ.ಕಳ್ಳಿಗುದ್ದಿ ಸೇರಿದಂತೆ ಅನೇಕರು ಇದ್ದರು.

Related posts: