ಘಟಪ್ರಭಾ:ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ
ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ
ಘಟಪ್ರಭಾ ಸೆ 20 : ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ದಿ.25 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಸಾಲಮನ್ನಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಘಟಪ್ರಭಾದಲ್ಲಿ ರೈತರಿಗೆ ಅರ್ಜಿಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಇಲ್ಲಿನ ಮೃತ್ಯುಂಜಯ ಸರ್ಕಲ್‍ನಲ್ಲಿ ರೈತ ಸಂಘ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಅವರ ನೇತೃತ್ವದಲ್ಲಿ ಸೇರಿದ ನೂರಾರು ರೈತರು ಕೆಲ ಕಾಲ ರಸ್ತೆ ತಡೆ ನಡೆಸಿ ದಿ. 25ರಂದು ಬೆಳಗಾವಿಯಲ್ಲಿ ಸಾಲ ಮನ್ನಕ್ಕೆ ಅರ್ಜಿ ಸಲ್ಲಿಸುವ ಸಲುವಾಗಿ ಇಂದು ಸೇರಿದ ಸುತ್ತಮುತ್ತಲಿನ ರೈತರಿಗೆ ಅರ್ಜಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಗಣಪತಿ ಇಳಿಗೇರ ಮಾತನಾಡಿ ಪ್ರತಿಯೊಬ್ಬ ರೈತನ ಜಮೀನಿಗೆ ಕೃಷಿಗಾಗಿ ನೀರು ಹಾಗೂ ರೈತರ ಪ್ರತಿ ಬೆಳೆಗೆ ನ್ಯಾಯುತ ಬೆಲೆ ಪೂರೈಕೆ ಆಗುವವರೆಗೆ ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು. ಸ್ವಾತಂತ್ರ್ಯ ಸಿಕ್ಕೂ 70 ವರ್ಷ ಕಳೆದರು ಸರಕಾರಗಳು ಹಳ್ಳಿಗರನ್ನು ಸುಧಾರಿಸುವಲ್ಲಿ ವಿಫಲವಾಗಿದೆ ಮಹತ್ವದ ನೀರಾವರಿ ಯೋಜನೆಗಳನ್ನು ಇನ್ನು ಜಾರಿಗೆ ತಂದಿಲ್ಲ ಪದೆ ಪದೆ ಬರಗಾಲಕ್ಕೆ ತುತ್ತಾಗುತ್ತಿದ್ದರು ರೈತರ ಬೀಜ, ರಸಗೊಬ್ಬರಗಳನ್ನು ಖಾಸಗಿ ಮಾಲಿಕತ್ವಕ್ಕೆ ಸರಕಾರ ನೀಡಿ ಅವರ ಮುಂದೆ ರೈತರು ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮುತ್ತೆಪ್ಪ ಬಾಗನ್ನವರ, ಸತ್ಯೆಪ್ಪ ಮಲ್ಲಾಪೂರೆ, ಮಂಜು ಪೂಜೇರಿ, ಮಹಾದೇವ ಘೋಡೆರ, ಪ್ರಕಾಶ ಹಾಲನ್ನವರ, ಮುತ್ತೆಪ್ಪ ಕುರುಬರ, ಸಿದ್ದಾಪ್ಪ ತಪಸಿ, ವಾಸು ಪಾಂಡ್ರೋಳಿ, ಭೀಮಶಿ ಹುಣಕುಂಟೆ, ನಿರ್ಮಾಲ ಶಿಂದಿಕುರಬೆಟ್ಟ, ಗೋಪಾಲ ಕೋಕನೂರ, ಅಶೋಕ ಸಾವಳಿಗಿ, ಮಲ್ಲಿಕಾರ್ಜುನ ಜವಾರಿ ಹಾಜರಿದ್ದರು.