ಗೋಕಾಕ:ರಾಜ್ಯೋತ್ಸವ ಅಂಗವಾಗಿ ತಾಲೂಕಾಡಳಿತ ವತಿಯಿಂದ ರಂಗೋಲಿ ಬಿಡಿಸುವ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮ
ರಾಜ್ಯೋತ್ಸವ ಅಂಗವಾಗಿ ತಾಲೂಕಾಡಳಿತ ವತಿಯಿಂದ ರಂಗೋಲಿ ಬಿಡಿಸುವ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 30 :
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಾಲೂಕಾಡಳಿತದ ವತಿಯಿಂದ ಸಾರ್ವಜನಿಕರಿಗೆ ರಂಗೋಲಿ ಬಿಡಿಸುವ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮ ಶನಿವಾರದಂದು ಜರುಗಿತು.
ನಗರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳೆಯರು ವಿವಿಧ ಬಗೆಯ ದೇಶಿ ಸಿಹಿ ತಿಂಡಿಗಳು ಹಾಗೂ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಮ್ಮ ಮನೆಯಲ್ಲಿಯೇ ತಯಾರಿಸಿ, ದೇಶಿ ತಿಂಡಿಗಳ ಪ್ರದರ್ಶನದಲ್ಲಿ ಭಾಗವಹಿಸಿದರು.
ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಕರ್ನಾಟಕ ರಾಜ್ಯೋತ್ಸವ ಶುಭಾಶಯ ಕೋರುವ ರಂಗೋಲಿ ಚಿತ್ರಗಳನ್ನು ಬಿಡಿಸಿದ್ದರು. ಸ್ಥಳೀಯ ನಾಗರಿಕರು ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ದೇಶಿ ತಿಂಡಿಗಳ ಪ್ರದರ್ಶನದಲ್ಲಿ ಭಾಗವಹಿಸಿ ತಾಲೂಕಾಡಳಿತದ ವಿನೂತನ ಕಾರ್ಯಕ್ರಮವನ್ನು ಅಭಿನಂಧಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಶಿಶುಅಭಿವೃದ್ಧಿ ಇಲಾಖೆಯ ಅಧಿಕಾರಿ ಜಯಶ್ರೀ ಶಿಲವಂತ, ಕಂದಾಯ ನಿರೀಕ್ಷಕ ಎಸ್ ಎನ್ ಹಿರೇಮಠ, ವಿಜಯಕುಮಾರ ಖನಗಾಂವಿ, ಬಿ ಎಮ್ ವಣ್ಣೂರ ಸೇರಿದಂತೆ ವಿವಿಧ ಮಹಿಳಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಇದ್ದರು.