ಗೋಕಾಕ:ಬಸವರಾಜ ಖಾನಪ್ಪನವರ ಅವರಿಗೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ : ಮುರುಘರಾಜೇಂದ್ರ ಶ್ರೀ ಅಭಿಮತ
ಬಸವರಾಜ ಖಾನಪ್ಪನವರ ಅವರಿಗೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ : ಮುರುಘರಾಜೇಂದ್ರ ಶ್ರೀ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 2 :
ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನವರ ಅವರಿಗೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಸಾಪ ಸದಸ್ಯರು ತಮ್ಮ ಮತಗಳನ್ನು ನೀಡಿ ಆಯ್ಕೆ ಮಾಡುವ ಮೂಲಕ ಗಡಿ ಭಾಗದಲ್ಲಿ ಕನ್ನಡವನ್ನು ಗಟ್ಟಿಗೊಳಿಸಬೇಕೆಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರದಂದು ನಗರದ ಕಾಡಸಿದ್ದೇಶ್ವರ ಮಠದಲ್ಲಿ ದಿವಂಗತ ಸಾಹಿತಿ ಜ್ಯೋತಿ ಹೊಸೂರು ವೇದಿಕೆಯಲ್ಲಿ ಹಮ್ಮಿಕೊಂಡ ಕಸಾಪ ಚುನಾವಣೆ ಪ್ರಣಾಳಿಕೆ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಕುತ್ತು ಬಂದಾಗ ಮುಂಚೂಣಿಯಲ್ಲಿ ಇದ್ದು ಹೋರಾಟಗಳನ್ನು ಸಂಘಟಿಸುವ ಮೂಲಕ ತಾಲೂಕಿನಲ್ಲಿ ಕನ್ನಡದ ಜಾಗೃತಿ ಮೂಡಿಸುವಲ್ಲಿ ಇವರ ಪಾತ್ರ ಹಿರಿಯದಾಗಿದೆ. ಕಳೆದ 16 ವರ್ಷಗಳಿಂದ ಹಿರಿಯರ ಮಾರ್ಗದರ್ಶನದಲ್ಲಿ ಕನ್ನಡಪರ ಕಾರ್ಯಗಳ ಜೊತೆಗೆ ಹಲವಾರು ಸಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಮಾಡುತ್ತಾ ಬಂದು ಜಿಲ್ಲೆಯಲ್ಲಿ ತಮ್ಮ ಕಾರ್ಯ ಪಡೆಯನ್ನು ರಚಿಸಿದ್ದಾರೆ. ಇಂಥ ಹೋರಾಟಗಾರರು ಕನ್ನಡ ಸಾಹಿತ್ಯ ಪರಿಷತಗೆ ಬೇಕಾಗಿದ್ದಾರೆ. ಅವರನ್ನು ಆಯ್ಕೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಮತ್ತು ಪರಿಷತ್ತನ್ನು ಗಟ್ಟಿಗೊಳಿಸಬೇಕಾಗಿದೆ ಆ ನಿಟ್ಟಿನಲ್ಲಿ ಬರುವ ನವೆಂಬರ್ 21 ರಂದು ಜರುಗುವ ಚುನಾವಣೆಯಲ್ಲಿ ಬಸವರಾಜ ಖಾನಪ್ಪನವರ ಅವರನ್ನು ಕಸಾಪ ಸದಸ್ಯರು ತಮ್ಮ ಮತವನ್ನು ನೀಡುವ ಮೂಲಕ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಕಸಾಪ ಚುನಾವಣೆ ಪ್ರಣಾಳಿಕೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಬಿಡುಗಡೆ ಗೋಳಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚುನಾವಣೆ ಇತರ ಸಾಮಗ್ರಿಗಳನ್ನು ಬಿಡುಗಡೆ ಗೊಳಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಚುನಾವಣಾ ಅಭ್ಯರ್ಥಿ ಬಸವರಾಜ ಖಾನಪ್ಪನವರ ವಹಿಸಿದ್ದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಚಾಳಿ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಗಡನಟ್ಟಿ, ಜಾನಪದ ವಿದ್ವಾಂಸ ಡಾ.ಸಿ.ಕೆ ನಾವಲಗಿ, ಮಕ್ಕಳ ಸಾಹಿತಿ ಡಾ. ಎಲ್.ಎಸ್.ಚೌರಿ, ಶ್ರೀಮತಿ ಪುಷ್ಪಾ ಮುರಗೋಡ, ಶ್ರೀಮತಿ ಶಂಕುತಲಾ ದಂಡಗಿ, ಶ್ರೀಮತಿ ರಜನಿ ಜಿರಗ್ಯಾಳ, ಶ್ರೀಮತಿ ಭಾರತಿ ಮದಬಾವಿ , ಮಹೆಬೂಬ ಮಕಾಂದರ , ಸಾದಿಕ ಹಲ್ಯಾಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಶೈಲಜಾ ಕೊಕ್ಕರಿ ನಿರೂಪಿಸಿದರು. ಹಿರಿಯ ಸಾಹಿತಿ ಈಶ್ವರಚಂದ್ರ ಬೆಟಗೇರಿ ವಂದಿಸಿದರು. ಕಾರ್ಯಕ್ರಮದ ಮೊದಲಿಗೆ ದಿವಂಗತ ಪುನೀತ್ ರಾಜಕುಮಾರ್ ಮತ್ತು ಪ್ರೋ ದಿವಂಗತ ಜ್ಯೋತಿ ಹೊಸೂರು ಅವರ ಆತ್ಮಕ್ಕೆ ಶಾಂತಿ ನಿಡಲೆಂದು ಪ್ರಾರ್ಥಿಸಿ ಮೌನಾಚರಣೆ ನಡೆಸಲಾಯಿತು.