ಗೋಕಾಕ:ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಒಬ್ಬ ಹೋರಾಟಗಾರನನ್ನು ಆಯ್ಕೆ ಮಾಡಿ : ಅಭ್ಯರ್ಥಿ ಖಾನಪ್ಪನವರ ಮನವಿ
ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಒಬ್ಬ ಹೋರಾಟಗಾರನನ್ನು ಆಯ್ಕೆ ಮಾಡಿ : ಅಭ್ಯರ್ಥಿ ಖಾನಪ್ಪನವರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 4 :
ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಒಬ್ಬ ಹೋರಾಟಗಾರನನ್ನು ಆಯ್ಕೆ ಮಾಡಬೇಕೆಂದು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜ ಖಾನಪ್ಪನವರ ಮನವಿ ಮಾಡಿದರು.
ಗುರುವಾರದಂದು ತಾಲೂಕಿನ ಬೂದಿಹಾಳ ಮತ್ತು ಸುಲದಾಳ ಗ್ರಾಮಗಳಲ್ಲಿ ಕಸಾಪ ಸದಸ್ಯರ ಮನೆ ಮನೆಗಳಿಗೆ ಭೇಟಿಯಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
106 ವರ್ಷಗಳ ಇತಿಹಾಸ ಹೊಂದಿರುವ ಕಸಾಪಕ್ಕೆ ಹೋರಾಟಗಾರರ ಅವಶ್ಯಕತೆ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತ ನೀಡಿ ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಕಲ್ಪಿಸಕೊಡಬೇಕು. ಕಸಾಪಕ್ಕೆ ಆಯ್ಕೆಯಾಗಿ ಗಡಿಭಾಗದಲ್ಲಿ ಕನ್ನಡವನ್ನು ಕಟ್ಟಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಯುವ ಸಾಹಿತಿಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ ,ಸಂತೋಷ್ ಖಂಡ್ರಿ , ಮಹಾದೇವ ಮಕ್ಕಳಗೇರಿ,ಅಡಿವೆಪ್ಪ ಕಮತಗಿ, ಸುರೇಶ ಗೂಳಿ, ಪ್ರಕಾಶ ಕಮತಗಿ, ಮಂಜು ಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು