RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವದೆ ನಮ್ಮ ಪ್ರಮುಖ ಗುರಿ : ಶಾಸಕ ರಮೇಶ

ಗೋಕಾಕ:ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವದೆ ನಮ್ಮ ಪ್ರಮುಖ ಗುರಿ : ಶಾಸಕ ರಮೇಶ 

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವದೆ ನಮ್ಮ ಪ್ರಮುಖ ಗುರಿ : ಶಾಸಕ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 19 :

 
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವದೆ ನಮ್ಮ ಪ್ರಮುಖ ಗುರಿಯಾಗಿದ್ದು, ಪಕ್ಷ ಘೋಷಿಸುವ ಮೊದಲ ಅಭ್ಯರ್ಥಿಯನ್ನು ಗೆಲ್ಲಿಸಿ ಎರಡನೇ ಅಭ್ಯರ್ಥಿಗೆ ಆಯ್ಕೆ ಮಾಡತ್ತೇವೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ನಗರದ ಹೊರ ವಲಯದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಗೋಕಾಕ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು

ಕಳೆದ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ವಿವೇಕರಾವ ಪಾಟೀಲ ಅವರಿಗೆ ನಾವು ಬೆಂಬಲ ನೀಡಿದ್ದರಿಂದ ಬಿಜೆಪಿ ಅಭ್ಯರ್ಥಿ ಕವಟಿಗಿಮಠ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ ಆದರೆ ಈ ಬಾರಿ ಹಾಗೆ ಆಗುವುದಿಲ್ಲ ಬಿಜೆಪಿ ಅಭ್ಯರ್ಥಿ ಕವಟಿಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಿಸಿ ನಂತರ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಒಟ್ಟಾರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವದೆ ನಮ್ಮ ಗುರಿಯಾಗಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಎರಡನೇ ಅಭ್ಯರ್ಥಿ ಯಾರಾಗಬೇಕು ಎಂದು ನಿರ್ಧರಿಸುತ್ತೇವೆ.

ಸತತ ಆರು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ ಕೊಂಡಿರುವ ವಿವೇಕರಾವ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿಲ, ಕಾಂಗ್ರೆಸ್ ಪಕ್ಷದಿಂದ ವಿವೇಕರಾವ ಪಾಟೀಲ ಅವರಿಗೆ ಅನ್ಯಾಯವಾಗಿದೆ. ವಿವೇಕರಾವ ಅವರಿಗೆ ಭೇಟಿಯಾಗಿ ಬಿಜೆಪಿ ಬೆಂಬಲಿಸಲು ಮನವಿ ಮಾಡುತ್ತೇನೆ. ಅವರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಪಕ್ಷ ಒಪ್ಪಿದರೆ ವಿವೇಕರಾವರನ್ನು ಬಿಜೆಪಿ ಪಕ್ಷಕ್ಕೆ ಕರೆ ತರುತ್ತೇನೆ. ಮುಂದೆ ಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿಯೂ ಸಹ ಬಿಜೆಪಿ ಪಕ್ಷವನ್ನು ಗೆಲ್ಲಿಸಿ, ಮೂಲೆ ಮೂಲೆಯಲ್ಲಿ ಬಿಜೆಪಿ ಪಕ್ಷವನ್ನು ಬಿಲಿಷ್ಠ ಮಾಡೋಣಾ ಯಾವುದೇ ಗೊಂದಲಕ್ಕೆ ಕಿವಿಗೊಡದೆ ಕಾರ್ಯಕರ್ತರು ಪಕ್ಷದ ಪರ ಕಾರ್ಯ ಮಾಡಬೇಕು ಎಂದು ಹೇಳಿದರು.
ಲಖನ ಜಾರಕಿಹೊಳಿ ಅವರಿಗೆ ಟಿಕೆಟ್ ಕೇಳಿಲ್ಲ : ವಿಧಾನ ಪರಿಷತ್ ಚುನಾವಣೆಗೆ ಲಖನ ಜಾರಕಿಹೊಳಿ ಅವರಿಗೆ ಎರಡನೇ ಅಭ್ಯರ್ಥಿ ಮಾಡಬೇಕೆಂದು ವರಿಷ್ಠರಿಗೆ ಕೇಳಿಲ್ಲಾ ಲಖನ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಾರೆಂದು ಪತ್ರಿಕೆಗಳಲ್ಲಿ ಬಂದ ವರದಿಗಳಿಂದ ತಿಳಿದು ಕೊಂಡಿದ್ದೇನೆ. ಚುನಾವಣೆಗೆ ಸ್ವರ್ಧಿಸುವದು ಬಿಡುವದು ಅದು ಅವರ ವೈಯಕ್ತಿಕ ವಿಚಾರ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಎರಡನೇಯ ಪ್ರಾಶಸ್ತ್ಯದ ಮತ ಯಾರಿಗೆ ಚಲಾಯಿಸಬೇಕು ಎಂದು ನಿರ್ಧಾರ ಮಾಡಲಾಗುವದು ಎಂದು ಶಾಸಕ ರಮೇಶ ಹೇಳಿದರು.
ರೈತ ಮಸೂದೆ ವಾಪಸ ಸ್ವಾಗತಾರ್ಹ : ಬಹು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ರೈತ ಮಸೂದೆ ಕಾಯ್ದೆಯನ್ನು ಕೇಂದ್ರ ಸರಕಾರ ವಾಪಸ ಪಡೆದಿದ್ದು ಸ್ವಾಗತಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿ , ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಅಮಿತ್ ಶಾ ಅವರು ರೈತರ ಹಿತ ಕಪಾಡುವ ನಿಟ್ಟಿನಲ್ಲಿ ಈ ನಿರ್ಣಯ ತಗೆದುಕೊಂಡಿದ್ದಾರೆ ಮುಂದೆ ಇದು ಪಕ್ಷಕ್ಕೆ ಲಾಭದಾಯಕವಾಗಲಿದೆ ಎಂದು ಪ್ರಧಾನಿ ಅವರ ಕ್ರಮವನ್ನು ಸ್ವಾಗತಿಸಿದರು.

ಎಲ್.ಎಚ್.ಬಂಡಿ ಸ್ವಾಗತಿಸಿದರು. ಜಿ.ಪಂ ಮಾಜಿ ಸದಸ್ಯ ಟಿ.ಆರ್.ಕಾಗಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಮಾಜಿ ಶಾಸಕ ಎಂ.ಎಲ್.ಮುತನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಚಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಪ್ರೇಮಾ ಭಂಡಾರಿ, ಸುಭಾಷ ಪಾಟೀಲ, ಘಟಪ್ರಭಾ ಕಾರಖಾನೆ ಅಧ್ಯಕ್ಷ ಅಶೋಕ ಪಾಟೀಲ , ರಾಜೇಂದ್ರ ಗೌಡಪ್ಪಗೋಳ, ಸುರೇಶ್ ಪಾಟೀಲ, ಭೀಮಶಿ ಭರಮನ್ನವರ ,ಮಡೆಪ್ಪ ತೋಳಿನವರ, ಹಿರಿಯ ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ , ಡಿ.ಎಂ ದಳವಾಯಿ, ಡಾ. ಜಿ,ಆರ್, ಸೂರ್ಯವಂಶಿ, ಕೆ.ಡಿ.ಕಲಾಲ, ಮಡೆಪ್ಪ ತೋಳಿನವರ, ಬಸವರಾಜ ಹಿರೇಮಠ್, ಶಫೀ ಜಮಾದರ, ಶಾಮಾನಂದ ಪೂಜೇರಿ ಹಾಗೂ ತಾಲೂಕಿನ ವಿವಿಧ ಗ್ರಾಪಂ, ಪಪಂ ಸದಸ್ಯರು ಉಪಸ್ಥಿತರಿದ್ದರು.

Related posts: