RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅರಣ್ಯ ಇಲಾಖೆಯ ಉದ್ಯಾನದಲ್ಲಿ ಕಾಣಿಸಿಕೊಂಡ ಹೆಬ್ಬಾವು : ಸುರಕ್ಷಿತ ಸ್ಥಳಕ್ಕೆ ಬಿಟ್ಟ ಉರಗ ತಜ್ಞರು

ಗೋಕಾಕ:ಅರಣ್ಯ ಇಲಾಖೆಯ ಉದ್ಯಾನದಲ್ಲಿ ಕಾಣಿಸಿಕೊಂಡ ಹೆಬ್ಬಾವು : ಸುರಕ್ಷಿತ ಸ್ಥಳಕ್ಕೆ ಬಿಟ್ಟ ಉರಗ ತಜ್ಞರು 

ಅರಣ್ಯ ಇಲಾಖೆಯ ಉದ್ಯಾನದಲ್ಲಿ ಕಾಣಿಸಿಕೊಂಡ ಹೆಬ್ಬಾವು : ಸುರಕ್ಷಿತ ಸ್ಥಳಕ್ಕೆ ಬಿಟ್ಟ ಉರಗ ತಜ್ಞರು

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 19 :

  ಹಿಲ್ ಗಾರ್ಡನ್ ಹತ್ತಿರ ವಿರುವ ಅರಣ್ಯ ಇಲಾಖೆಯ ( ಟ್ರೀ ಪಾರ್ಕ್) ಉದ್ಯಾನವನದಲ್ಲಿ ಶುಕ್ರವಾರ ಬೆಳಿಗ್ಗೆ  ಕಾಣಿಸಿಕೊಂಡ ಹೆಬ್ಬಾವುವೊಂದನ್ನು ಉರಗ ತಜ್ಞರು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ಘಟನೆ ನಗರದಲ್ಲಿ ನಡೆದಿದೆ.

ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಉದ್ಯಾನವನದಲ್ಲಿ ಹೆಬ್ಬಾವು ಕಂಡು ಗಾಬರಿಗೊಂಡು ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ನಗರದ ಉಗರ ತಜ್ಞರ ಸಹಾಯದೊಂದಿಗೆ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ,  ವಲಯ ಅರಣ್ಯ ಅಧಿಕಾರಿ ಕೆ ಎನ್ ವನ್ನೂರ, ಉಪವಲಯ ಅಧಿಕಾರಿ ಎಸ್ ಎಸ್ ಕೊಳವಿ, ಎನ್ ಎಸ್ ಈರಯ್ಯನವರ, ಜಾಮೂನಿ, ಉರಗ ತಜ್ಞರಾದ
ಲಕ್ಷ್ಮಣ ಮಿಶ್ಯಾಳೆ ,  ಮಹೇಶ ಬಡೆಪ್ಪಗೋಳ, ಇಮ್ತಿಯಾಜ  ಜಮಾದಾರ, ಲಕ್ಕಪ್ಪ ನಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: