ಗೋಕಾಕ:ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶಿಯ ಕಲೆ, ಸಂಸ್ಕೃತಿಯ ಅರಿವು ಮುಖ್ಯವಾಗಿದೆ : ಜಯಾನಂದ ಮಾದರ
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶಿಯ ಕಲೆ, ಸಂಸ್ಕೃತಿಯ ಅರಿವು ಮುಖ್ಯವಾಗಿದೆ : ಜಯಾನಂದ ಮಾದರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 27 :
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೇಶಿಯ ಕಲೆ, ಸಂಸ್ಕೃತಿಯ ಅರಿವು ಮುಖ್ಯವಾಗಿದ್ದು, ನೆಲ ಮೂಲ ಸಂಸ್ಕೃತಿಯಿಂದ ಬದುಕು ಭದ್ರವಾಗುತ್ತದೆ ಎಂದು ಕರ್ನಾಟಕ ಲಲಿತ ಕಲಾ ಅಕ್ಯಾಡಮಿಯ ಸದಸ್ಯ ಜಯಾನಂದ ಮಾದರ ಹೇಳಿದರು.
ಶನಿವಾರದಂದು ನಗರದ ಮಯೂರ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ ಪ್ರಜ್ಞಾವಂತರಾಗಲು ಶಿಕ್ಷಣ ಅತಿ ಅವಶ್ಯಕವಾಗಿದೆ. ಇಷ್ಟಪಟ್ಟು ವಿದ್ಯಾಬ್ಯಾಸ ಮಾಡಿ ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿ ನಾಡಿನ ಕೀರ್ತಿಯನ್ನು ಹೆಚ್ಚಿಸಿರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಮುತ್ತೆಶ್ವರ ದಟ್ಟಿ ಕುಣಿತ ಕಲಾವಿದರಿಂದ ದಟ್ಟಿಕುಣಿತ ಪ್ರದರ್ಶನ ನಡೆಯಿತು ಹಾಗೂ ಕಲಾವಿದ ಮತ್ತು ಅತಿಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಲಾವಿದ ಮಹಾದೇವ ಈರಪ್ಪ ಪಾರ್ವತಿ, ಪ್ರಾಚಾರ್ಯೆ ಸಿ.ಬಿ.ಪಾಗದ, ಶಿಕ್ಷಕರಾದ ಎಂ.ಸಿ.ವಣ್ಣೂರ, ಎನ್.ಎ ಮಕಾಂದರ ಇದ್ದರು. ವಿಜಯಶ್ರೀ ಎಚ್.ಎಸ್.ಸ್ವಾಗತಿಸಿದರು. ಬಿ.ಜಿ.ಪಾಟೀಲ ನಿರೂಪಿಸಿದರು , ಶ್ರೀದೇವಿ ದೇಸಾಯಿ ವಂದಿಸಿದರು. ಪಿ.ಆರ್.ತಾಂವಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.