RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ:ಮೊದಲ ಪ್ರಾಶಸ್ತ್ಯ ಮತ ಬಿಜೆಪಿಗೆ ಹಾಕಿ, ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಗೆ ಹಾಕಬೇಡಿ : ಶಾಸಕ ಬಾಲಚಂದ್ರ

ಬೆಳಗಾವಿ:ಮೊದಲ ಪ್ರಾಶಸ್ತ್ಯ ಮತ ಬಿಜೆಪಿಗೆ ಹಾಕಿ, ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಗೆ ಹಾಕಬೇಡಿ : ಶಾಸಕ ಬಾಲಚಂದ್ರ 

ಮೊದಲ ಪ್ರಾಶಸ್ತ್ಯ ಮತ ಬಿಜೆಪಿಗೆ ಹಾಕಿ, ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಗೆ ಹಾಕಬೇಡಿ : ಶಾಸಕ ಬಾಲಚಂದ್ರ

 

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ನ 27 :

 

ಬರುವ ಡಿಸೆಂಬರ್ 10 ರಂದು ಜರುಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಬಿಜೆಪಿ ಅಭ್ಯರ್ಥಿ ಪರ ಹಾಕಿ , ಎರಡನೇ ಪ್ರಾಶಸ್ತ್ಯದ ಮತ ಕಾಂಗ್ರೆಸ್ ಪಕ್ಷಕ್ಕೆ ಹಾಕಬೇಡಿ ಎಂದು ಮತದಾರರಿಗೆ ಹೆಳಲಾಗುವದು ಎಂದು ಕೆಎಂಎಫ್ ಅಧ್ಯಕ್ಷ , ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು

ಶನಿವಾರದಂದು ನಗರದ ಖಾಸಗಿ ಹೊಟೇಲನಲ್ಲಿ ತಮ್ಮನ್ನು ಭೇಟಿಯಾದ ಪರ್ತಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು .

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯನ್ನು ಗೆಲ್ಲಿಸೋದು ನಮ್ಮ ಮೊದಲ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಚರ್ಚಿಸಲು ಸಭೆ ಕರೆಯಲಾಗಿದ್ದು , ಇದರಲ್ಲಿ ಬೆಳಗಾವಿ ಕೆಎಂಎಫ್ ಅಧ್ಯಕ್ಷ ವಿವೇಕರಾವ ಪಾಟೀಲ ಸೇರಿ ಜಿಲ್ಲೆಯ ವಿವಿಧ ಸಂಘ ಸಂ‌ಸ್ಥೆಯ ಮುಖಂಡರು ಭಾಗವಹಿಸಲಿದ್ದಾರೆ. ಅವರಿಂದ ಬಿಜೆಪಿ ಪಕ್ಷಕ್ಕೆ ಆಗುವ ಎಲ್ಲಾ ಲಾಭಗಳನ್ನು ಪಡೆದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮತದಾರರಿಗೆ ಮೊದಲನೇ ಪ್ರಾಶಸ್ತ್ಯ ಮತ ಬಿಜೆಪಿಗೆ ನೀಡಿ ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ನೀಡಬಾರದು ಎಂದು ಹೇಳುತ್ತೇವೆ ಎಂದು ಹೇಳಿದರು.
ಎರಡನೇ ಪ್ರಾಶಸ್ತ್ಯ ಮತದ ಬಗ್ಗೆ ಚರ್ಚಿಸಲು ಪಕ್ಷದ ಹೈಕಮಾಂಡ್ ಗೆ ಭೇಟಿಯಾಗಲು ಶಾಸಕ ರಮೇಶ ಜಾರಕಿಹೊಳಿ ಅವರು ದೆಹಲಿ ತೆರಳಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ‌ಸಕರು ಇದು ನನಗೆ ಗೋತ್ತಿಲ್ಲ ಈ ಬಗ್ಗೆ ರಮೇಶ ಅವರು ನನ್ನೊಂದಿಗೆ ಮಾತನಾಡಿಲ ಎಂದು ಹೇಳಿದರು. ಜಾರಕಿಹೊಳಿ ಸಹೋದರರು ಸತೀಶ ಜಾರಕಿಹೊಳಿ ಅವರನ್ನು ನೋಡಿ ಕಲಿಯಬೇಕು ಎಂದು ಶಾಸಕಿ ಹೆಬ್ಬಾಳ್ಕರ ಹೇಳಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸಹೋದರ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಾವು ಸಹ ಬೆಳೆದು ಬಂದಿದ್ದೇವೆ‌. ಸತೀಶ ಅವರ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರು ಇಟ್ಟ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು ಇವರ ಪ್ರೀತಿ , ವಿಶ್ವಾಸ ಸಹೋದರ ಸತೀಶ ಅವರ ಮೇಲೆ ಈಗೂ ಇರಲಿ ಮುಂದೆಯೂ ಹೀಗೆ ಇರಲಿ, 2023 ರ ಚುನಾವಣೆಯಲ್ಲಿಯೂ ಇರಲಿ ಎಂದು ಹಾಸ್ಯ ಚಟಾಕೆ ಹಾರಿಸಿದರು.

Related posts: