ಘಟಪ್ರಭಾ :ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ
ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ
ಘಟಪ್ರಭಾ ಸೆ 22: ಇತ್ತೀಚೆಗೆ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಅಂತರವಲಯ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಮಹಿಳಾ ಖೋ-ಖೋ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ
ರಾಜಶ್ರೀ ಪಾಮದಿನ್ನಿ(ನಾಯಕಿ) ಹಾಲವ್ವ ಗಲಗಲಿ, ರುಕ್ಮೀಣಿ ಪಾಮದಿನ್ನಿ, ಸರೋಜಿನಿ ಮೂಡಲಗಿ, ಅಶ್ವೀನಿ ಮಾವರಕರ, ಐಶ್ವರ್ಯ ಬೆಳಕೂಡ, ಶಿಲ್ಪಾ ಮಧೂರ, ಅಂಜನಾ ಮುದ್ದಾಪೂರ, ಮಂಜುಳಾ, ರೇಣುಕಾ, ನಂದಿನಿ, ಉಮಾಶ್ರೀ, ಆರತಿ, ತಂಡದಲ್ಲಿದ್ದರು.
ರಾಜಶ್ರೀ ಪಾಮದಿನ್ನಿ ಮತ್ತು ರುಕ್ಮೀಣಿ ಪಾಮದಿನ್ನಿ ಖೋ-ಖೋ ಬ್ಲೂ ಹಾಗೂ ವಿವಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇವರನ್ನು ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ದೈಹಿಕ ನಿರ್ದೇಶಕ ಪ್ರೊ. ಬಿ. ಕೆ. ಸೊಂಟನವರ ಹಾಗೂ ಬೊಧಕ/ಬೋಧಕೇತರ ಸಿಬ್ಬಂಧಿ ಅಭಿನಂದಿಸಿದ್ದಾರೆ.