RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿಕಲಚೇತನ ಮಕ್ಕಳಿಗೆ ಪ್ರೋತ್ಸಾಹಿಸಿ ಪ್ರತಿಭಾನ್ವಿತರನ್ನಾಗಿ ಮಾಡಿ ; ಡಿ ಎಸ್ ಕುಲಕರ್ಣಿ

ಗೋಕಾಕ:ವಿಕಲಚೇತನ ಮಕ್ಕಳಿಗೆ ಪ್ರೋತ್ಸಾಹಿಸಿ ಪ್ರತಿಭಾನ್ವಿತರನ್ನಾಗಿ ಮಾಡಿ ; ಡಿ ಎಸ್ ಕುಲಕರ್ಣಿ 

ವಿಕಲಚೇತನ ಮಕ್ಕಳಿಗೆ ಪ್ರೋತ್ಸಾಹಿಸಿ ಪ್ರತಿಭಾನ್ವಿತರನ್ನಾಗಿ ಮಾಡಿ ; ಡಿ ಎಸ್ ಕುಲಕರ್ಣಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 3 :

 

ವಿಕಲಚೇತನ ಮಕ್ಕಳಲ್ಲೂ ಪ್ರತಿಭೆ ಹಾಗೂ ಸಾಮಥ್ರ್ಯವಿದ್ದು, ಅವರಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಿ ಪ್ರತಿಭಾನ್ವಿತರನ್ನಾಗಿ ಮಾಡುವಂತೆ ಅಕ್ಷರ ದಾಸೋಹ ಯೋಜನಾ ಜಿಲ್ಲಾ ಶಿಕ್ಷಣಾಧಿಕಾರಿ ಡಿ ಎಸ್ ಕುಲಕರ್ಣಿ ಹೇಳಿದರು.
ಅವರು, ಶುಕ್ರವಾರದಂದು ನಗರದ ಹೊರವಲಯದ ಅಡಿಬಟ್ಟಿ ಬಡಾವಣೆಯ ಎಚ್.ಪಿ.ಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ತಾಲೂಕ ಕಾನೂನು ನೆರವು ಸೇವಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಮಾತನಾಡುತ್ತ, ವಿಕಲಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇಲಾಖೆ ಶ್ರಮಿಸುತ್ತಿದೆ. ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಎಲ್ಲ ಅಂಗವಿಕಲ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರತಿ ಬುಧವಾರ ಸಂಪನ್ಮೂಲ ಕೇಂದ್ರದಲ್ಲಿ ಪಿಜಿಯೊ ಥೇರೆಪಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರತಿ ವರ್ಷ ಉಚಿತವಾಗಿ ಸಾಧನಾ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು, ಪಾಲಕರು ಇದರ ಸದುಪಯೋಗದಿಂದ ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಂತೆ ಕರೆ ನೀಡಿದರು.
ಮಕ್ಕಳಿಗೆ ಹಾಗೂ ಪಾಲಕರಿಗೆ ವಿವಿಧ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಫರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಬದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಮ್ ಬಿ ಪಾಟೀಲ, ಬಿಸಿಯೂಟ ಯೋಜನಾ ಸಹಾಯಕ ನಿರ್ದೇಶಕ ಎ ಬಿ ಮಲಬನ್ನವರ, ಡಾ.ಶುಭಂ ಹುಕ್ಕೇರಿ, ಮುಖ್ಯೋಪಾಧ್ಯಾಯ ಜಿ ಆರ್ ಮಾಳಗಿ, ಕೆ ಸಿ ಯರಗಟ್ಟಿ, ಐ ಬಿ ಸಂಪಗಾಂವಿ, ಎಸ್ ಬಿ ಕೊಂತಿ, ಟಿ ಯು ಈರಗಾರ, ಎಚ್ ಆರ್ ಕೊಣ್ಣೂರ ಇದ್ದರು.
ಶಿಕ್ಷಕರಾದ ವಿ ಎಸ್ ಖನಗಾಂವಿ ಸ್ವಾಗತಿಸಿದರು. ಎ ವಿ ದಳವಾಯಿ ನಿರೂಪಿಸಿದರು, ಕೆ ಎಸ್ ದಡ್ಡಿ ವಂದಿಸಿದರು.

Related posts: