RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ವೈಯಕ್ತಿಕ ಕ್ರೀಡೆಗಳಲ್ಲಿ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ

ಗೋಕಾಕ:ವೈಯಕ್ತಿಕ ಕ್ರೀಡೆಗಳಲ್ಲಿ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ 

ವೈಯಕ್ತಿಕ ಕ್ರೀಡೆಗಳಲ್ಲಿ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ‌ 4 :

 
ಪದವಿ ಪೂರ್ವ ಶಿಕ್ಷಣ ಇಲಾಖೆಯವರು ತಾಲೂಕಿನ ಘಟಪ್ರಭಾದ ಎಸ್‍ಡಿಟಿ ಪಿಯೂ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೈಯಕ್ತಿಕ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎತ್ತರ ಜಿಗಿತದಲ್ಲಿ ಬಾಳೇಶ ಮಳಲಿ ಪ್ರಥಮ , ಯೋಗ ಮತ್ತು 500 ಮೀಟರ್ ಓಟದಲ್ಲಿ ಗೀತಾ ದಳವಾಯಿ ಪ್ರಥಮ , ಕುಸ್ತಿಯಲ್ಲಿ ಗುರುಸಿದ್ದಪ್ಪ ಮೇಳಗಡೆ ಪೂಜೇರಿ ಪ್ರಥಮ, ಚದುರಂಗದಲ್ಲಿ ನಾಗೇಶ ಸೋಗಲದ ಪ್ರಥಮ, ಯಾಮರ ಥ್ರೋನಲ್ಲಿ ಗಾಯತ್ರಿ ಕಳಸಣ್ಣವರ ಪ್ರಥಮ , 200 ಮೀಟರ ಓಟದಲ್ಲಿ ಆಸೀಪ ಮಕಾಂದರ ದ್ವಿತೀಯ, ಎತ್ತರ ಜಿಗಿತದಲ್ಲಿ ಭಾಗ್ಯಶ್ರಿ ನಾವಿ ದ್ವಿತೀಯ, ಯೋಗದಲ್ಲಿ ರೋಹಿಣಿ ಕೆಂಪಣ್ಣಗೋಳ ಪ್ರಥಮ ಹಾಗೂ 500 ಮೀಟರ್ ಓಟದಲ್ಲಿ ದ್ವಿತೀಯ , ಎತ್ತರ ಜಿಗಿತದಲ್ಲಿ ಸುನಿಲ್ ಕರೋಶಿ ದ್ವಿತೀಯ , ಸೈಕ್ಲಿಂಗನಲ್ಲಿ ರಮೇಶ ಬಡಿಗೇರ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ‌

ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಚೇರಮನ ಡಾ. ಭೀಮಶಿ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಪ್ರಾಚಾರ್ಯ ಅರುಣ ಪೂಜೇರ, ಉಪನ್ಯಾಸಕ ಎನ್ ಕೆ ಮಿರಾಶಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಬಿ ಬಾಗಾಯಿ ಹಾಗೂ ಸಿಬ್ಬಂಧಿ ಅಭಿನಂದಿಸಿದರು.

Related posts: