RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ: ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾದ ಪೋಲಿಸರು

ಘಟಪ್ರಭಾ: ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾದ ಪೋಲಿಸರು 

 ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾದ ಪೋಲಿಸರು

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಡಿ 4 :

 
ಪಟ್ಟಣದ ಮುಖ್ಯ ರಸ್ತೆ ಮದ್ಯ ಭಾಗದಿಂದ ಹಾದು ಹೋಗುವುದರಿಂದ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ಸ್ಥಳೀಯ ಪೋಲಿಸ್ ಠಾಣೆ PI ಶ್ರೀಶೈಲ ಬ್ಯಾಕೂಡ ಅವರು ಈ ಸಮಸ್ಯೆ ನಿವಾರಣೆಗೆ ಮುಂದಾಗಿದ್ದು, ಇಂದು ಪಟ್ಟಣದ ಕೆಲವೊಂದು ಜನದಟ್ಟಣೆಯ ಸ್ಥಳಗಳನ್ನು ಗುರುತಿಸಿ ಅಲ್ಲಿ ನೋ ಪಾರ್ಕಿಂಗ್ ಬೋರ್ಡ್ಗಳನ್ನು ಅಳವಡಿಸಲಾಗಿದೆ.

ವಾಹನ ನಿಲುಗಡೆಗೆ ಕೆಲವು ಸ್ಥಳಗಳನ್ನು ಗುರುತಿಸಿರುವ ಪೋಲಿಸರು ಸಮ ಬೆಸ (ಆಡ್ ಇವನ್) ನಿಯಮ ದಂತೆ ವಾಹನಗಳನ್ನು ನಿಲ್ಲಿಸಲು ಸೂಚಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನಮಗೆ ಸಹಕರಿಸಿ ಇಲ್ಲದಿದ್ದರೆ ತಮ್ಮ ಮೇಲೆ ಕಾನೂನು ಪ್ರಕಾರ ನಿಮ್ಮ ವಾಹನಗಳ ಮೇಲೆ ದಂಡ ವಿಧಿಸಲಾಗುವದು ಎಂದು ಪೋಲಿಸ್ ಇಲಾಖೆಯವರು ತಿಳಿಸಿದ್ದಾರೆ.

ಪೋಲೀಸ್ ಇಲಾಖೆಯವರು ತಮ್ಮ ಜವಾಬ್ದಾರಿಯನ್ನು ಅರಿತು ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಿಸಲು ಮುಂದಾಗಿದ್ದು ಸ್ವಾಗತಾರ್ಹ ಆದರೆ ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಷ್ಟೇ ಮಹತ್ವದ್ದಾಗಿದೆ.

ಈ ಸಂದರ್ಭದಲ್ಲಿ ಪುರಸಭೆ ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ಇದ್ದರು.

Related posts: