RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು : ಆರತಕ್ಷತೆ ಸಮಾರಂಭದಲ್ಲಿ ವಧು – ವರರು ಸಂಭ್ರಮಾಚರಣೆ

ಗೋಕಾಕ:ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು : ಆರತಕ್ಷತೆ ಸಮಾರಂಭದಲ್ಲಿ ವಧು – ವರರು ಸಂಭ್ರಮಾಚರಣೆ 

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು : ಆರತಕ್ಷತೆ ಸಮಾರಂಭದಲ್ಲಿ ವಧು – ವರರು ಸಂಭ್ರಮಾಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 14 :

 
ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಜಯಭೇರಿ ಸಾಧಿಸಿದ ಪ್ರಯುಕ್ತ ನಗರದ ಅವರ ಅಭಿಮಾನಿ ಇರ್ಷಾದ್ ನೇರ್ಲಿ ತಮ್ಮ ಮದುವೆ ಆರತಕ್ಷತೆ ಸಮಾರಂಭದಲ್ಲಿ ವಧು – ವರರು ಲಖನ್ ಜಾರಕಿಹೊಳಿ ಅವರ ಭಾವಚಿತ್ರವನ್ನು ಪ್ರರ್ದಶಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಎಲ್ಲರೂ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾದಿಕ ಹಲ್ಯಾಳ ರಾಜ್ಯದಲ್ಲಿ ನಡೆದ ವಿಧಾನ ಪರಿಷತ ಚುನಾವಣೆಯಲ್ಲಿ ಯುವ ಮುಖಂಡ ಲಖನ ಜಾರಕಿಹೊಳಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಪಕ್ಷೇತರರಾಗಿ ಗೆದ್ದ ಒಬ್ಬನೇ ಒಬ್ಬ ಅಭ್ಯರ್ಥಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಯುವ ಉತ್ಸಾಹಿ ಲಖನ ಜಾರಕಿಹೊಳಿ ಅವರ ಗೆಲುವು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಲಖನ ಜಾರಕಿಹೊಳಿ ಅವರ ಗೆಲುವಿನಿಂದ ಜಿಲ್ಲೆಯ ಎಲ್ಲಾ ಪಂಚಾಯತಗಳಿಗೆ ಹೊಸ ಕಾಯಕಲ್ಪ ಸಿಗಲಿದ್ದು , ನೂತನ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಯನ್ನಾಗಿ ಮಾಡಲಿದ್ದಾರೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ನೂತನ ವಧು – ವರರಾದ ಇರ್ಫಾದ ನೇರ್ಲಿ , ಶ್ರೀಮತಿ ರಕ್ಸಾನಾ ನೇರ್ಲಿ,ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ , ಪ್ರತೀಕ ಪಾಟೀಲ, ಮುಗುಟ ಪೈಲವಾನ,ಅಬ್ಬು ಮುಜಾವರ,ರಂಜಾನ್ ಅಂಡಗಿ, ಸದ್ದಾಂ ಹುದಲಿ,ಆಸೀಫ ಮುಕ್ಕೇರಿ, ಸಲ್ಲಾಂನ ಖಾಜಿ,ಸೊಹೇಲ ಅವಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: