ಗೋಕಾಕ:ಪರಿಹಾರ ಧನ ಚೆಕ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ
ಪರಿಹಾರ ಧನ ಚೆಕ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 19 :
ಕೋವಿಡ್-19 ಮಹಾಮಾರಿಯಿಂದ ಅನೇಕ ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದೆವೆ. ಅಂತವರಿಗೆ ಕೇಂದ್ರ ಸರಕಾರ ಮೃತ ಕುಟುಂಬದ ಫಲಾನುಭವಿಗಳ ಖಾತೆಗೆ 50 ಸಾವಿರ ರೂಪಾಯಿ ಪರಿಹಾರ ಧನ ಈಗಾಗಲೇ ಜಮೆ ಮಾಡುತ್ತಿದ್ದು, ರಾಜ್ಯ ಸರಕಾರದಿಂದಲೂ ಒಂದು ಲಕ್ಷ ಪರಿಹಾರ ವಿತರಿಸಲಾಗುತ್ತಿದೆ ಫಲಾನುಭವಿಗಳ ಇದರ ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ತಮ್ಮ ಕಾರ್ಯಾಲಯದಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ರಾಜ್ಯಸರಕಾರದಿಂದ ನೀಡಲಾಗುತ್ತಿರುವ ಒಂದು ಲಕ್ಷ ರೂಪಾಯಿ ಪರಿಹಾರ ಧನ ಚೆಕಗಳನ್ನು ರವಿವಾರದಂದು ವಿತರಿಸಿ, ಮಾತನಾಡಿದರು.
ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಈಗಾಗಲೇ ಬಿಪಿಎಲ್ ಕಾರ್ಡ ಹೊಂದಿರುವ 23 ಫಲಾನುಭವಿಗಳ ಚೌಕಗಳನ್ನು ವಿತರಿಸಲಾಗಿದ್ದು, ಅತಿ ಶೀಘ್ರದಲ್ಲಿ ಇನ್ನುಳಿದ ಎಪಿಎಲ್ ಕಾರ್ಡ ಹೊಂದಿರುವ ಕೋವಿಡನಿಂದ ಮೃತರಾದ ಕುಟುಂಬ ಸದಸ್ಯರಿಗೆ ಪರಿಹಾರ ಧನ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರ ಲಕ್ಷ್ಮಣ ಭೋವಿ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೆÇೀಲಿಸಗೌಡರ, ಕಾಂತು ಎತ್ತಿನಮನಿ, ಸುರೇಶ ಸನದಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮ ಲೆಕ್ಕಾಧಿಕಾರಿಗಳಾದ ಬಿ ಎಸ್ ದೇಸಾಯಿ, ಮಲ್ಲಿಕಾರ್ಜುನ ಘಡಕರಿ, ಭಾಸ್ಕರ ಜೋಶಿ ಸೇರಿದಂತೆ ಅನೇಕರು ಇದ್ದರು.