ಗೋಕಾಕ:ಕಲಾವಿದರ ಪ್ರೋತ್ಸಾಹಕ್ಕೆ ಸತೀಶ ಜಾರಕಿಹೊಳಿ ಪೌಂಡೇಶನ್ ಸದಾ ಸಿದ್ದ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ
ಕಲಾವಿದರ ಪ್ರೋತ್ಸಾಹಕ್ಕೆ ಸತೀಶ ಜಾರಕಿಹೊಳಿ ಪೌಂಡೇಶನ್ ಸದಾ ಸಿದ್ದ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 20 :
ಗೋಕಾಕಿನ ಕಲಾವಿದರ ಪ್ರೋತ್ಸಾಹಕ್ಕೆ ಸತೀಶ ಜಾರಕಿಹೊಳಿ ಪೌಂಡೇಶನ್ ಸದಾ ಸಿದ್ದವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಗೋಕಾಕ ಕಲಾವಿದರ ಬಳಗ ಹಾಗೂ ಮಾರ್ಡನ ಮೆಲೋಡಿಸ ಆರ್ಕೇಸ್ಟ್ರಾ ವತಿಯಿಂದ ದಿವಂಗತ ಕಲಾವಿದ ಶಿವಾನಂದ ಪೂಜಾರಿ ಅವರ ಸಹಾಯಾರ್ಥ ಹಮ್ಮಿಕೊಂಡಿದ್ದ ಸ್ವರ-ನಮನ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಗೋಕಾಕ ಅಷ್ಟೇ ಅಲ್ಲ ಇಡಿ ಜಿಲ್ಲೆಯ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಮುಂದೆಯೂ ಸಹ ಕಲಾವಿದರ ವೃತ್ತಿ ಜೀವನದ ಜೊತೆಗೆ ಬದುಕ ಕಟ್ಟಿಕೊಳ್ಳಲು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮನ್ನು ಅಗಲಿದ ಕಲಾವಿದ ಶಿವಾನಂದ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರೀಯಾಂಕಾ ಜಾರಕಿಹೊಳಿ, ಸನತ ಜಾರಕಿಹೊಳಿ, ರಜನಿ ಜಿರಗ್ಯಾಳ, ಜಯಾನಂದ ಮುನ್ನೋಳಿ, ಮಹಾಂತೇಶ ತಾಂವಶಿ, ರಿಯಾಜ ಚೌಗಲಾ, ಬ್ರಹ್ಮಣ್ಣಾ ಉಪ್ಪಾರ,ಡಾ .ಜಗದೀಶ್ ಉಮರಾಣಿ,ಹಾಗೂ ಕಲಾವಿದ ಶಿವಾನಂಧ ಪೂಜಾರಿ ಅವರ ತಾಯಿ ಮತ್ತು ಧರ್ಮಪತ್ನಿ ಉಪಸ್ಥಿತರಿದ್ದರು.