RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ

ಗೋಕಾಕ:ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ 

ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 22 :

 

ಗಣಿತ ತಜ್ಞ ಶ್ರೀನಿವಾಸ ರಾಮಾನುಜ ಅವರು ಗಣಿತ ಲೋಕಕ್ಕೆ ನೀಡಿದ ಕೊಡುಗೆಯ ನೆನಪಿಗಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಎಸ್.ಎಲ್.ಜೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ ಕೆ ಕುಲಕರ್ಣಿ ಹೇಳಿದರು.

ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಆಚರಿಸಲಾದ ರಾಷ್ಟ್ರೀಯ ಗಣಿತ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗಣಿತ ಶಾಸ್ತ್ರದಲ್ಲಿ ಸಂಖ್ಯಾ ಪದ್ದತಿ, ಪ್ರಮೇಯ ಹಾಗೂ ಗಣಿತ ಸೂತ್ರಗಳನ್ನು ನೀಡಿ ಗಣಿತ ವಿಷಯದಲ್ಲಿ ಶ್ರೀನಿವಾಸ ರಾಮಾನುಜ ಅವರ ಫೆಲೋಸಿಫ್ ಪಡೆದ ಪ್ರಥಮ ಭಾರತೀಯರಾಗಿದ್ದಾರೆ. ಅವರು ನೀಡಿದ ಗಣಿತ ಸೂತ್ರಗಳು ಸ್ವರ್ವಕಾಲಕ್ಕೂ ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡಿ ಅವರಂತೆ ಮಹಾನ ವ್ಯಕ್ತಿಗಳಾಗಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕ ಎಸ್.ಕೆ ಓಂಕಾರ , ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮೀ ಹಮ್ಮಣವರ ಇದ್ದರು.
ವಿದ್ಯಾರ್ಥಿಗಳಾದ ಭಾಗ್ಯಶ್ರಿ ಕೊಪ್ಪದ ಸ್ವಾಗತಿಸಿದರು, ಗೀತಾ ಸೋಮನಟ್ಟಿ ನಿರೂಪಿಸಿದರು, ಅರಣುಸಿಂಗ ರಜಪೂತ ವಂದಿಸಿದರು.

Related posts: