RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ

ಗೋಕಾಕ:ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ 

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ

ಗೋಕಾಕ ಸೆ 23: ಕನ್ನಗ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ ಎಂದು ಸಹಕಾರಿ ಪತ್ತಿನ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ಹೋಸಮಠ ಹೇಳಿದರು

ಅವರು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ಶನಿವಾರದಂದು ಕರವೇ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು

ಸುಮಾರು 2500 ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ಉಳಿಸಿ ಬೆಳೆಸಲು ಇಂದು ನಾವು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ . ಕರ್ನಾಟಕ ಸರಕಾರ ಕನ್ನಡ ಭಾಷೆಯ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಡ್ಡಾಯವಾಗಿ ಬಳಕೆಗೆ ಬರುವಂತೆ ಕಠಿಣ ಕಾನೂನುಗಳನ್ನು ಜಾರಿ ತರಬೇಕಾಗಿದೆ ಆ ದೀಸೆಯಲ್ಲಿ ಕನ್ನಡ ಪರ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರಲು ಕಾರ್ಯಪ್ರವೃತ ವಾಗಬೇಕಾಗಿದೆ ಆಗ ಮಾತ್ರ ಕನ್ನಡ ಭಾಷೆಯನ್ನು ನಾವು ಬೇರು ಮಟ್ಟದಿಂದ ಉಳಿಸಿ ಬೆಳೆಸಲು ಸಾಧ್ಯ ಎಂದು ಡಾ. ಸಂಜಯ ಹೋಸಮಠ ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ವಹಿಸಿದ್ದರು .
ಕಾರ್ಯಕ್ರಮವನ್ನು ಕೃಷ್ಣಾ ಖಾನಪ್ಪನವರ ನಿರೂಪಿಸಿ ವಂದಿಸಿದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ , ಉಪಾಧ್ಯಕ್ಷ ದೀಪಕ ಹಂಜಿ , ಹನಿಫಸಾಬ ಸನದಿ , ಶೆಟ್ಟೆಪಾ ಗಾಡಿವಡ್ಡರ, ಕೆಂಪ್ಪಣಾ ಕಡಕೋಳ, ರವಿ ನಾವಿ , ಬಸ್ಸು ಗಾಡಿವಡ್ಡರ, ನಾರಾಯಣ ವಾಗುಲೇ , ನಿಯಾಜ ಪಟೇಲ್ , ಶಾನೂಲ ದೇಸಾಯಿ, ಶಂಕರ ಹಾಲವ್ವಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: