ಗೋಕಾಕ:ಜಿಲ್ಲಾ ಮಟ್ಟದ ಇನ್ಸಪೈಯರ್ ಆರ್ವಾಡ್ಸ ಸ್ವರ್ಧೆ:ತಾಲೂಕಿನ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಜಿಲ್ಲಾ ಮಟ್ಟದ ಇನ್ಸಪೈಯರ್ ಆರ್ವಾಡ್ಸ ಸ್ವರ್ಧೆ:ತಾಲೂಕಿನ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 11 :
ಜಿಲ್ಲಾ ಮಟ್ಟದ ಇನ್ಸಪೈಯರ್ ಆರ್ವಾಡ್ಸ ಸ್ವರ್ಧೆಯಲ್ಲಿ ತಾಲೂಕಿನ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಕುಂದರಗಿ ಎಂ.ಬಿ.ಹೊನಜಾ ಪ್ರೌಢಶಾಲೆಯ ಲಕ್ಷ್ಮಣ ಅಣ್ಣಿಕೇರಿ, ಹಿರೇನಂದಿಯ ಜಿ.ಎಚ್.ಎಸ್.ನ ಪ್ರವಿಣ ಸಿದ್ದನವರ, ನಗರದ ನವ ಜೀವನ ಮಿಷನ್ ನ ರಿಷೀತಾ ಜರತಾರಕರ , ನ್ಯೂ ಇಂಗ್ಲಿಷ್ ಸ್ಕೂಲನ ಆಪೇಕ್ಷಾ ಹಿರೇಮಠ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಸಕ ರಮೇಶ ಜಾರಕಿಹೊಳಿ , ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಬಿಇಒ ಜಿ.ಬಿ.ಬಳಗಾರ ಹಾಗೂ ಬಿ.ಆರ್.ಸಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.