ಗೋಕಾಕ:ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶ ಭಕ್ತರಾಗಿದ್ದರು : ರಮೇಶ ಅಳಗುಂಡಿ
ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶ ಭಕ್ತರಾಗಿದ್ದರು : ರಮೇಶ ಅಳಗುಂಡಿ
ಬೆಳಗಾವಿ ಇ – ವಾರ್ತೆ, ಗೋಕಾಕ ಜ 14 :
ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿಶ್ವಕ್ಕೆ ಸಾರಿದ ಅಪ್ರತಿಮ ದೇಶ ಭಕ್ತರಾಗಿದ್ದರು. ವಿವೇಕಾನಂದರು ಯುವಕರಿಗೆ ಆದರ್ಶಪ್ರಯರಾಗಿ ಉಳಿದಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಬೆಟಗೇರಿ ಗ್ರಾಮದ ಯುವ ಬ್ರಿಗೇಡ್ ವತಿಯಿಂದ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜ.12 ರಂದು ಆಯೋಜಿಸಿದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಇಂದಿನ ಯುಗದಲ್ಲಿ ಯುವಕರು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಸ್ಥಳೀಯ ಯುವ ಬ್ರಿಗೇಡ್ ಸದಸ್ಯ ವಿಜಯ ಹಿರೇಮಠ, ಈರಣ್ಣ ಬಳಿಗಾರ, ಮಂಜು ಪತ್ತಾರ, ಶಿವು ನಾಯ್ಕರ, ರಾಘು ಬೆಟಗೇರಿ, ಭರಮಣ್ಣ ಪೂಜೇರಿ, ಮುತ್ತೆಪ್ಪ ನೀಲಣ್ಣವರ, ಈರಣ್ಣ ದಂಡಿನ, ರಮೇಶ ಕಂಬಿ, ಮೋಹನ ತುಪ್ಪದ, ಮಲ್ಲಿಕಾರ್ಜುನ ಹಿರೇಮಠ, ಗಣಪತಿ ಭಾಗೋಜಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಇಲ್ಲಿಯ ಯುವ ಬ್ರಿಗೇಡ್ ಸದಸ್ಯರು, ಇತರರು ಇದ್ದರು.