RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ 

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ

ಘಟಪ್ರಭಾ ಸೆ 23: ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸ್ಸಾಪೂರೆ ಹೇಳಿದರು.

ಸಮೀಪದ ಕೊಟಬಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗೋಕಾಕದ ಡಾ| ಬೀರನಗಡ್ಡಿಯವರ ಅಥರ್ವ ಆಸ್ಪತ್ರೆ, ಗ್ರಾ.ಪಂ ಕೊಟಬಾಗಿ, ಸರ್ಕಾರಿ ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ನೇತ್ರತ್ವದಲ್ಲಿ ಸರ್ವಪಲ್ಲಿ ಡಾ| ರಾಧಾಕೃಷ್ಣನ ಅವರ 130ನೇ ಜನ್ಮ ದಿನಾಚರಣೆ ನಿಮಿತ್ಯ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಆರೋಗ್ಯ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯ ತೋರುತ್ತಿದ್ದಾನೆ. ವೈದ್ಯರು ಇಂತಹ ಶಿಬಿರಗಳನ್ನು ಆಯೋಜನೆ ಮಾಡುವುದರ ಜೊತೆಗೆ ಗ್ರಾಮಸ್ಥರ ಸಹಕಾರದಿಂದ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಚಿಕಿತ್ಸೆ ಉಪಯೋಗವಾಗುತ್ತಿದೆ ಎಂದರು.

ಈ ಶಿಬಿರದಲ್ಲಿ ಡಾ| ಮಲ್ಲಿಕಾರ್ಜುನ ಬೀರನಗಡ್ಡಿ, ಡಾ| ಕೀರ್ತಿ ಬೀರನಗಡ್ಡಿ, ಡಾ| ಅಶೋಕ ಮುರಗೋಡ, ಡಾ| ಆನಂದ ಯತ್ತಿನಮನಿ, ಡಾ| ವೆಂಕಟೇಶ ಬಡಗನ್ನವರ, ಡಾ| ಸಂದೀಪ ಪಾಟೀಲ ಅವರುಗಳು ಭಾಗವಹಿಸಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ನಾಯಿಕ, ಉಪನ್ಯಾಸಕ ಆರ್.ಎಂ.ಮಠದ, ಬಡಿಗೇರ, ಪಿಡಿಒ ನಂದಗಾಂವಿ, ಬಸವರಾಜ ಮರಡಿ, ಗ್ರಾ.ಪಂ ಅಧ್ಯಕ್ಷ ರಾಜಕುಮಾರ ಪಾಟೀಲ, ಎಸ್‍ಡಿಎಂಸಿ ಅಧ್ಯಕ್ಷ ರಾಜು ಪಾಟೀಲ ಇದ್ದರು.

ಎಸ್.ಎನ್. ಉರಜಿಂಗೋಳ ಸ್ವಾಗತಿಸಿದರು. ಜೆ.ಎಸ್.ಚೌಗಲಾ ನಿರೂಪಿಸಿದರು. ಡಿ.ಬಿ.ಹುಲಕುಂದ ವಂದಿಸಿದರು.

Related posts: