RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ: ವೈದ್ಯಕೀಯ ಸಿಬ್ಬಂದಿ ಮೈಮರೆತರೆ ದೊಡ್ಡ ಅನಾಹುತ : ದುರಂತ ಮರುಕಳಿಸದಂತೆ ನೋಡಿಕೊಳ್ಳಿ : ಶಾಸಕ ಅಭಯ ಪಾಟೀಲ

ಬೆಳಗಾವಿ: ವೈದ್ಯಕೀಯ ಸಿಬ್ಬಂದಿ ಮೈಮರೆತರೆ ದೊಡ್ಡ ಅನಾಹುತ : ದುರಂತ ಮರುಕಳಿಸದಂತೆ ನೋಡಿಕೊಳ್ಳಿ : ಶಾಸಕ ಅಭಯ ಪಾಟೀಲ 

ವೈದ್ಯಕೀಯ ಸಿಬ್ಬಂದಿ ಮೈಮರೆತರೆ ದೊಡ್ಡ ಅನಾಹುತ : ದುರಂತ ಮರುಕಳಿಸದಂತೆ ನೋಡಿಕೊಳ್ಳಿ : ಶಾಸಕ ಅಭಯ ಪಾಟೀಲ

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜ 17 :

ಮಕ್ಕಳಿಗೆ ಲಸಿಕೆ ನೀಡಿಕೆ ವಿಷಯದಲ್ಲಿ ನಡೆದ ದುರಂತ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ತಿಳಿಸಿದರು.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವೈದ್ಯಕೀಯ ಸಿಬ್ಬಂದಿ ಮೈಮರೆತರೆ ದೊಡ್ಡ ಅನಾಹುತಗಳು ಆಗುವ ಸಂಭವ ಇರುತ್ತದೆ. ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ನೋಡಿಕೊಳ್ಳಬೇಕು. ಲಸಿಕೆ ಸರಿ ಇಲ್ಲವಾದರೆ ಅದನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಕೋರಿದ್ದೇನೆ’ ಎಂದರು.

‘ಫೆ.15ರ ಒಳಗೆ ಮೇಯರ್‌-ಉಪಮೇಯರ್‌ ಚುನಾವಣೆ ನಡೆಯಲಿದೆ. ನಗರಪಾಲಿಕೆ ಸದಸ್ಯರ ಪ್ರಮಾಣವಚನ ಕಾರ್ಯಕ್ರಮವೂ ಜರುಗಲಿದೆ. ನಗರದಲ್ಲಿ ಮೊದಲ ಬಿಜೆಪಿಯ ಮೇಯರ್‌ ಕೂಡ ಆಗುತ್ತಾರೆ’ ಎಂದು ತಿಳಿಸಿದರು.

‘ಆಡಳಿತಾತ್ಮಕ ಹಿತದೃಷ್ಟಿಯಿಂದ, ಸಚಿವ ಸಂಪುಟ ವಿಸ್ತರಣೆ ಮಾಡುವುದಿದ್ದರೆ ತ್ವರಿತವಾಗಿ ಕ್ರಮ ವಹಿಸಬೇಕು. ವರಿಷ್ಠರ ನಿರ್ಧಾರ ಒಪ್ಪುತ್ತೇವೆ. ಏನಿದ್ದರೂ ಪೂರ್ಣ ವಿರಾಮ ಹಾಕಬೇಕು’ ಎಂದರು.

‘ಈಗ ಮಂತ್ರಿಯಾಗುವವರಿಗೆ ಖಾತೆ ಬಗ್ಗೆ ತಿಳಿದುಕೊಳ್ಳಲು 6 ತಿಂಗಳು ಬೇಕಾಗುತ್ತದೆ. ಯಾರು ಜನಪರವಾಗಿ ಕೆಲಸ ಮಾಡಬೇಕು ಎಂದುಕೊಂಡಿರುತ್ತಾರೋ ಅವರಿಗೆ ಅವಕಾಶ ಸಿಗುವುದು ಕಡಿಮೆ’ ಎಂದು ಪ್ರತಿಕ್ರಿಯಿಸಿದರು.

‘ನಾನು ಆರ್‌ಎಸ್‌ಎಸ್‌ನಿಂದ ಬೆಳೆದು ಬಂದವನು. ವರಿಷ್ಠರ ನಿರ್ಣಯ ಒಪ್ಪುವವನು. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಆದರೆ, ನನ್ನ ಬಗ್ಗೆ ಪ್ರೀತಿ ಇರುವವರಿಗೆ ಅಸಮಾಧಾನ ಆಗಬಹುದು. ಹೀಗಾಗಿ ಸಚಿವ ಸ್ಥಾನ ಕೊಡಬೇಕು ಎಂದು ಮಾತನಾಡುತ್ತಾರೆ. ಎಲ್ಲವನ್ನೂ ಪಕ್ಷದವರು ನಿರ್ಣಯಿಸಬೇಕಾಗುತ್ತದೆ. ನಾನೆಂದು ಆ ಸ್ಥಾನದ ಆಸೆ ಇಟ್ಟುಕೊಂಡಿಲ್ಲ’ ಎಂದು ಹೇಳಿದರು.

‘ಖಾಸಗಿ ಸಗಟು ತರಕಾರಿ ಮಾರಾಕಟ್ಟೆಯಿಂದ ರೈತರಿಗೆ ಅನುಕೂಲ ಆಗುತ್ತದೆಯೇ ಹೊರತು, ತೊಂದರೆ ಆಗುವುದಿಲ್ಲ. ಎಪಿಎಂಸಿಗೆ ಹೇಗೆ ನಷ್ಟವಾಗುತ್ತದೆ ಎನ್ನುವುದನ್ನು ವಿರೋಧಿಸುತ್ತಿರುವವರು ತಿಳಿಸಲಿ. ಅಕ್ರಮವಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ’ ಎಂದು ಪ್ರತಿಕ್ರಿಯಿಸಿದರು.

‘ಕೆಲಸದಿಂದ ದೂರ ಉಳಿದು ಮುಷ್ಕರ ನಡೆಸುತ್ತಿರುವ ವಾಲ್ವ್‌ಮನ್‌ಗಳ ಬೇಡಿಕೆಯನ್ನು ಸಚಿವರ ಗಮನಕ್ಕೆ ತಂದಿದ್ದೇನೆ. ಆದರೂ ಅವರು ಹಬ್ಬಗಳ ಸಂದರ್ಭದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಹೊಸದಾಗಿ 70 ಮಂದಿ ವಾಲ್ವ್‌ಮನ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಮೂಲಕ ನೀರು ಸರಬರಾಜು ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

Related posts: