RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ವಿವಿಧ ಕಾಮಗಾರಿಗಳಿಗೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಚಾಲನೆ

ಗೋಕಾಕ:ವಿವಿಧ ಕಾಮಗಾರಿಗಳಿಗೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಚಾಲನೆ 

ವಿವಿಧ ಕಾಮಗಾರಿಗಳಿಗೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಚಾಲನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 19 :

 
ತಾಲೂಕಿನ ಮಾಲದಿನ್ನಿ ಗ್ರಾಮದ ವಿವಿಧ ಕಾಮಗಾರಿಗಳಿಗೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ಮಾಲದಿನ್ನಿ ಗ್ರಾಮಕ್ಕೆ ಜಲ ಜೀವನ ಮಿಷನ್ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಕಾಮಗಾರಿ ಹಾಗೂ ಪ್ರೌಢಶಾಲೆಯ ನೂತನ ಕೋಠಡಿಯ ಉದ್ಘಾಟನೆಯನ್ನು ಅಮರನಾಥ ಜಾರಕಿಹೊಳಿ ನೆರವೆರಿಸಿ ಮಾತನಾಡಿದ ಅವರು, ನಮ್ಮ ತಂದೆಯವರು ಸರಕಾರದಿಂದ ಸಾಕಷ್ಟು ಅನುದಾನ ತರುವ ಮೂಲಕ ಗೋಕಾಕ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಎಲ್ಲರು ಸಹಕರಿಸುವ ಮೂಲಕ ನಮ್ಮ ತಂದೆಯವರ ಕೈಬಲಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕೆಎಮ್‍ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರನ್ನು ಮಾಲದಿನ್ನಿ ಗ್ರಾಮದ ಯುವಕರು ಬೆಳ್ಳಿ ಗದೆ ನೀಡಿ ಭೀಮನ ಶಕ್ತಿ ರಾಮನ ಭಕ್ತಿ ಎಂದು ಘೋಷಣೆ ಕೂಗಿ ಆತ್ಮೀಯವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಗ್ರಾಪಂ ಸದಸ್ಯರಾದ ಲಕ್ಕಪ್ಪ ಉ ಭಂಡಿ, ಮಲ್ಲಿಕಾರ್ಜುನ ಸುಬ್ಬಾಪುರಮಠ, ಯಲ್ಲಪ್ಪ ಬಬಲಿ, ಮುತ್ತೆಪ್ಪ ಖಾನಪ್ಪನವರ ಹಾಗೂ ನ್ಯಾಯವಾದಿ ರಮೇಶ ಭಂಡಿ, ಸಿದ್ದು ಬಂಗೆನ್ನವರ, ಕಲ್ಲಪ್ಪ ಕುರಿ, ಲಕ್ಕಪ್ಪ ರಾಜಪ್ಪನವರ, ಲಕ್ಷ್ಮಣ ಉ ಭಂಡಿ, ಭೀರಪ್ಪ ದುರ್ಗಿಪೂಜೇರಿ, ಸಿದ್ದಪ್ಪ ಭಂಡಿ, ಲಕ್ಕಪ್ಪ ಹೊಸಕುರಬರ, ಯಲ್ಲಪ್ಪ ಭಂಗೆನ್ನವರ, ಅವಣಪ್ಪ ಭಂಡಿ, ಪ್ರಕಾಶ ಮಾಳೆದ ಸೇರಿದಂತೆ ಅನೇಕರು ಇದ್ದರು.

Related posts: