ಬೆಳಗಾವಿ:ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಲು ಮುಂದಾದ ಶಿವಸೇನೆ
ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಲು ಮುಂದಾದ ಶಿವಸೇನೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜ 20 :
ಮಹಾರಾಷ್ಟ್ರದ ಶಿವಸೇನೆ ಒಂದಿಲೊಂದು ತಕರಾರಿನಿಂದ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ಇರುತ್ತದೆ. ಈಗ ಮತ್ತೆ ಇವರ ಪುಂಡಾಟಿಕೆ ಶುರುವಾಗಿದ್ದು ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಲು ಮುಂದಾಗಿದೆ.
ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಅವಮಾನ ಮಾಡಿದ ಕನ್ನಡದ ಗುಂಡಾಗಳೆಂದು ತಮ್ಮ ಭಿತ್ತಿ ಪತ್ರದಲ್ಲಿ ಉಲ್ಲೇಖ ಮಾಡಿದೆ. ಬರುವ 22ನೇ ದಿನಾಂಕದಂದು ಬೆಳಿಗ್ಗೆ 9 ಗಂಟೆಗೆ ಛತ್ರಪತಿ ಶಿವಾಜಿ ಸಲುವಾಗಿ ದಾಂಡಿ ಮಾರ್ಚ್” (ಯಾತ್ರೆ) ಹಾಗೂ ಜೈಲಿನಲ್ಲಿ ಬಂಧಿಸಲ್ಪಟ್ಟವರನ್ನ ಬಿಡುಗಡೆಗೊಳಿಸುವಂತೆ “ಜೈಲು ಬಿಡುಗಡೆ ಚಳುವಳಿ” ಹೆಸರಿನಲ್ಲಿ ಕರ್ನಾಟಕ ಪ್ರವೇಶ ಮಾಡುತ್ತೇವೆ. ಗಡಿಯಲ್ಲಿ ಒಂದು ವೇಳೆ ಪೊಲೀಸರು ನಮಗೆ ಕರ್ನಾಟಕ ಪ್ರವೇಶ ಮಾಡಲು ತಡೆ ವಡ್ಡಿದರೆ ಸಾವಿರಾರು ಸಂಖ್ಯೆಯಲ್ಲಿ ಶಿವಸೇನೆಯ ಕಾರ್ಯಕರ್ತರಿಂದ ಕರ್ನಾಟಕದ ಗಡಿ ಪ್ರವೇಶ ಮಾಡಿ ಯಶಸ್ವಿ ಆಗೇ ಆಗುತ್ತೇವೆ ಎಂದು ಕೊಲ್ಹಾಪುರ ಜಿಲ್ಲೆ ಶಿವಸೇನೆ ಪ್ರಮುಖ ವಿಜಯ ದೇವಣೆ ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟ ಶಿವಸೇನೆ ಪುಂಡರು
ಈ ಹಿಂದೆ ಬೆಳಗಾವಿ ಗಡಿಯಲ್ಲಿ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅಣಕು ಶವಯಾತ್ರೆ ನಡೆಸಿ, ಪುಂಡಾಟಿಕೆ ಮೆರೆದಿದ್ದರು. ಜೊತೆಗೆ ಕನ್ನಡ ಧ್ವಜ ಸುಟ್ಟಿ, ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಧ್ವಂಸಗೊಳಿಸಿ ಕನ್ನಡಿಗರನ್ನ ಕೆರಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಬೃಹತ್ ಹೋರಾಟ ನಡೆಸಿದ್ದರು.
ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದರು. ಸಿಎಂ ಬೊಮ್ಮಾಯಿ ಅಣಕು ಶವಯಾತ್ರೆ ನಡೆಸಿ, ಬಳಿಕ ಪ್ರತಿಕೃತಿ ದಹನ ಮಾಡಿದ್ದಾರೆ. ಶಿವಸೇನೆಯ ಪ್ರಮುಖರಾದ ಚಂದ್ರಕಾಂತ ಮೈಗುರೆ ನೇತೃತ್ವದಲ್ಲಿ ಈ ರೀತಿ ಪುಂಡಾಟ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಪ್ರತಿಕೃತಿ ಜತೆಗೆ ಕನ್ನಡ ಬಾವುಟಕ್ಕೂ ಬೆಂಕಿ ಹಚ್ಚಿದ್ದರು.