RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ : ಹನಗಂಡಿಯ ಶ್ರೀ ಚನ್ನಬಸವ ಗುರುಜಿ

ಗೋಕಾಕ:ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ : ಹನಗಂಡಿಯ ಶ್ರೀ ಚನ್ನಬಸವ ಗುರುಜಿ 

ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ : ಹನಗಂಡಿಯ ಶ್ರೀ ಚನ್ನಬಸವ ಗುರುಜಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 20 :

 
ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವಂತೆ ಹನಗಂಡಿಯ ಶ್ರೀ ಚನ್ನಬಸವ ಗುರುಜಿ ಹೇಳಿದರು.
ಅವರು, ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂತನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ 150ನೇ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ತಂದೆ ತಾಯಿಗಳು ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಬಸವಾದಿ ಶರಣರ ವಚನಗಳ ಅರಿವನ್ನು ಬಾಲ್ಯದಿಂದಲೇ ಮೂಢಿಸಬೇಕು. ಮೇಲಿರಿಮೆ ಕಿಳಿರಿಮೆ ಎರಡನ್ನು ಹೊಗಲಾಡಿಸಿ ಸಮಾನತೆ ಸಾಧಿಸುವ ಗುರಿಯನ್ನು ಮಕ್ಕಳಲ್ಲಿ ಬೆಳೆಸಿ, ಅವರನ್ನು ಹಣಗಳಿಸುವ ಯಂತ್ರಗಳನ್ನಾಗಿ ಮಾಡದೆ ಮಾನವೀಯ ಮೌಲ್ಯಗಳುಳ್ಳ ಉತ್ತಮ ನಾಗರಿಕರನ್ನಾಗಿ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹನಗಂಡಿಯ ಶ್ರೀ ಚನ್ನಬಸವ ಗುರುಜಿ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯ ಮೇಲೆ ಬಟಕುರ್ಕಿಯ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಬಸನಗೌಡ ಪಾಟೀಲ, ಮೈಲಾರಲಿಂಗ ಉಪ್ಪಿನ, ಡಿ ಎನ್ ಬೆಟ್ಟದಗೌಡರ, ಬಸವರಾಜ ಡಂಬಳ, ವಿನಾಯಕ ಪಾಟೀಲ, ಶಕುಂತಲಾ ಕಟ್ಟಿ ಇದ್ದರು.

Related posts: