ಗೋಕಾಕ:ನಾಡದ್ರೋಹಿ ಸಂಘಟನೆಗಳ ಪುಂಡಾಟಿಕೆ ಹೆಚ್ಚಾದರೆ ಮಹಾರಾಷ್ಟ್ರ ಗಡಿಯೋಳಗೆ ನುಗ್ಗಿ ಹೊಡೆಯುತ್ತೇವೆ : ಖಾನಪ್ಪನವರ ಕಿಡಿ
ನಾಡದ್ರೋಹಿ ಸಂಘಟನೆಗಳ ಪುಂಡಾಟಿಕೆ ಹೆಚ್ಚಾದರೆ ಮಹಾರಾಷ್ಟ್ರ ಗಡಿಯೋಳಗೆ ನುಗ್ಗಿ ಹೊಡೆಯುತ್ತೇವೆ : ಖಾನಪ್ಪನವರ ಕಿಡಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 22 :
ನಾಡದ್ರೋಹಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳ ಪುಂಡಾಟಿಕೆ ಹೆಚ್ಚಾದರೆ ಇನ್ನೂ ಮುಂದೆ ಮಹಾರಾಷ್ಟ್ರ ಗಡಿಯೋಳಗೆ ನುಗ್ಗಿ ಅಡ್ಡಾಡಿಸಿ ಹೊಡೆಯುತ್ತೇವೆ ಎಂದು ಕನ್ನಡ ಪರ ಸಂಘಟನೆಗಳ ಮುಖಂಡ ಬಸವರಾಜ ಖಾನಪ್ಪನವರ ಎಚ್ಚರಿಕೆ ನೀಡಿದ್ದಾರೆ.
ಶನಿವಾರದಂದು ರಾಜ್ಯದ ಗಡಿ ಕಾಯಲು ಹೋರಟ ಕನ್ನಡ ಪರ ಹೋರಾಟಗಾರರನ್ನು ವಾಲ್ಮೀಕಿ ವೃತ್ತದಲ್ಲಿ ಪೊಲೀಸರು ತಡೆ ಹಿಡಿದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು .
ನಾಡದ್ರೋಹಿ ಸಂಘಟನೆಗಳ ಉದ್ಧಟತನಕ್ಕೆ ಕಡಿವಾಣ ಹಾಕಲು ಕನ್ನಡಪರ ಸಂಘಟನೆಗಳು ಕಂಕಣಬದ್ದವಾಗಿದ್ದು, ಮುಂದಿನ ದಿನಗಳಲ್ಲಿ ಶಿವಸೇನೆ ಪ್ರಮುಖ ದವಣೆಯಂತಹ ಪುಂಡರ ಕಿರಿಕಿರಿಯನ್ನು ಸಹಿಸಲು ಸಾಧ್ಯವಿಲ್ಲ. ಸರಕಾರ ಮಧ್ಯಸ್ಥಿಕೆ ವಹಿಸಿ ಎಂಇಎಸ್ ಮತ್ತು ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಸರಕಾರ ಇದಕ್ಕೆ ಮುಂದಾಗಬೇಕು. ಕೊರೋನಾ ಹಾಗೂ ಸರಕಾರದ ಮಾರ್ಗಸೂಚಿಯಂತೆ ಸಾಂಕೇತಿಕವಾಗಿ ಹೋರಾಟ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಮತ್ತೋರ್ವ ಹೋರಾಟಗಾರ ಕೆಂಪಣ್ಣ ಚೌಕಾಶಿ ಮಾತನಾಡಿ ಕಳೆದ ಹಲವಾರು ದಿನಗಳಿಂದ ಎಂಇಎಸ್ ಮತ್ತು ಶಿವಸೇನೆಯ ಉದ್ಧಟತನ ಹೆಚ್ಚಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಸರಕಾರ ಎಚ್ಚೆತ್ತುಕೊಂಡು ನಾಡದ್ರೋಹಿಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾರುತಿ ಚೌಕಾಶಿ , ಬಸವರಾಜ ಪಂಜಾನಟ್ಟಿ , ತಮ್ಮಣ್ಣಾ ಅರಭಾಂವಿ , ಭೀಮಶೀ ಪೂಜೇರಿ , ಸಿದ್ದಪ್ಪಾ ತೆಳಗೇರಿ , ಮಹಾನಿಂಗ ಬೋವುರಿ , ಸುನೀಲ ತಗ್ಗಿಮನಿ , ಶಶಿ ಚೌಕಾಶಿ, ದೀಪಕ ಹಂಜಿ , ನಿಜಾಮ ನಧಾಪ , ರಮೇಶ ಕಮತಿ , ಮುಗುಟ ಪೈಲವಾನ, ಮಲ್ಲು ಸಂಪಗಾರ , ಮಹಾದೇವ ಮಕ್ಕಳಗೇರಿ , ಬಸವರಾಜ ಗಾಡಿವಡ್ಡರ , ರಾಮ ಕುಡೆಮ್ಮಿ , ಬಸವರಾಜ ಗಣಾಚಾರಿ , ಯಲ್ಲಾಲಿಂಗ ಕಪ್ಪಲಗುದ್ದಿ , ಜಗದೀಶ ರಾಣಪ್ಪಗೋಳ , ಸತ್ತಾರ ಬೇಪಾರಿ , ಯಲ್ಲಪ್ಪಾ ಧರ್ಮಟ್ಟಿ ಉಪಸ್ಥಿತರಿದ್ದರು.