RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ : ತಹಶೀಲ್ದಾರ್

ಗೋಕಾಕ:ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ : ತಹಶೀಲ್ದಾರ್ 

ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ : ತಹಶೀಲ್ದಾರ್

ಗೋಕಾಕ ಸೆ 23: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರಿ ಸಂಘಗಳು ಅಭಿವೃದ್ದಿ ಪಥದತ್ತ ಸಾಗುವಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ ಎಂದು ದಿ.ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ಸಂಘದ ಅಧ್ಯಕ್ಷ ಮಾಯಪ್ಪ ತಹಶೀಲದಾರ ಹೇಳಿದರು.

ಶುಕ್ರವಾರದಂದು ನಗರದ ಗೊಂಬಿ ಗುಡಿ ಹತ್ತಿರವಿರುವ ಶ್ರೀ ರಾಮಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸದಸ್ಯರು ಆರ್ಥಿಕ ವ್ಯವಹಾರಗಳನ್ನು ಸಹಕಾರಿ ಸಂಘಗಳಲ್ಲಿ ನಡೆಸುವ ಮೂಲಕ ಸಂಘದ ಅಭಿವೃದ್ದಿಯ ಜೊತೆಗೆ ತಾವು ಕೂಡಾ ಆರ್ಥಿಕವಾಗಿ ಸಭಲರಾಗಬೇಕೆಂದು ತಿಳಿಸಿದರು.

ನಮ್ಮ ಸಹಕಾರಿ ಸಂಘವು ಸಾಮಾಜಿಕ ಕಳಕಳಿಂದಾ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡು ಸಹಕಾರಿ ತತ್ವದಡಿಯಲ್ಲಿ ಕಾರ್ಯನಿರ್ವಸುತ್ತಾ ಬಂದಿದ್ದು ಪ್ರಸಕ್ತ ಸಾಲಿನಲ್ಲಿ ಸುಮಾರು 4 ಕೋಟಿ ರೂಗಳ ವಾರ್ಷಿಕ ವ್ಯವಹಾರ ನಡೆಸಿ, 10ಲಕ್ಷ 81 ಸಾವಿರ ರೂಗಳ ನಿವ್ವಳ ಲಾಭಗಳಿಸಿ ಪ್ರಗತಿ ಪಥದತ್ತ ಸಾಗುತ್ತಿರುವುದುಕ್ಕೆ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರವೇ ಮುಖ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 2016-17 ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ದ್ವೀತಿಯ ಪಿಯುಸಿ ಹಾಗೂ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿ.ಆರ್.ಘಮಾಣಿ, ನಿರ್ದೇಶಕರುಗಳಾದ ಎನ್.ಎಫ್.ಹುಳ್ಳಿ, ಬಿ. ವಾಯ್. ರಂಕನಕೊಪ್ಪ,, ಬಿ.ಎಸ್.ಶಿಂಗಳಾಪೂರ, ಎಮ್.ಆರ್.ಜಡಿನವರ, ವಾಯ್.ಎಲ್.ಹೆಜ್ಜೆಗಾರ, ಜಿ.ಡಿ.ತಾಶೀಲದಾರ, ಶ್ರೀಮತಿ ಎಲ್.ಬಿ.ಕಿತ್ತೂರ, ಶ್ರೀಮತಿ ವಾಯ್.ಆರ್.ಖಾನಪ್ಪನ್ನವರ ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್.ಮಾಲಗಾವಿ ಸೇರಿದಂತೆ ಸದಸ್ಯರು, ಸಿಬ್ಬಂದಿಯರು ಇದ್ದರು.

Related posts: