ಘಟಪ್ರಭಾ :ಮಧುಕರ ಇನಾಮದಾರ ಪ್ರೌಡ ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ಕೊರೊನಾ ದೃಡ : ಬಿಇಒ ಅಜೀತ ಭೇಟಿ ಪರಿಶೀಲನೆ
ಮಧುಕರ ಇನಾಮದಾರ ಪ್ರೌಡ ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ಕೊರೊನಾ ದೃಡ : ಬಿಇಒ ಅಜೀತ ಭೇಟಿ ಪರಿಶೀಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 25 :
ಇಲ್ಲಿನ ಮಧುಕರ ಇನಾಮದಾರ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ದೃಡಪಟ್ಟ ಹಿನ್ನಲೆಯಲ್ಲಿ ಮೂಡಲಗಿ ಬಿಇಓ ಅಜೀತ ಮನ್ನಿಕೇರಿಯವರು ಪ್ರೌಡ ಶಾಲೆಗೆ ಮಂಗಳವಾರದಂದು ಭೇಟಿ ಕೊಟ್ಟು ಪರಿಶೀಲಿದರು.
ಕೊರೋನಾ ಸೊಂಕಿತ ನಾಲ್ಕು ವಿದ್ಯಾರ್ಥಿಗಳ ಮನೆಗಳಿಗೆ ಪೋನ ಮುಖಾಂತರ ಸಂಪರ್ಕಿಸಿ ಮಕ್ಕಳ ಅರೋಗ್ಯದ ಬಗ್ಗೆ ವಿಚಾರಿಸಿದರು, ಎಲ್ಲ ಮಕ್ಕಳು ಆರಾಮವಾಗಿರುವದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದ ಮನ್ನಿಕೇರಿಯವರು ಮನೆಯಲ್ಲಿ ಆರಾಮವಾಗಿದ್ದು, ಅಭ್ಯಾಸದ ಕಡೆಗೆ ಗಮನಕೊಡುವಂತೆ ತಿಳಿಸಿದರು. ಶಾಲೆಯನ್ನು ಸಂಪೂರ್ಣ ಸ್ಯಾನಿಟೈಜರ ಮಾಡಿಸಿ ಸ್ವಚ್ಛವಾಗಿಡುವಂತೆ ನಾಯಿಕ ಗುರುಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಸಿ.ಆರ್.ಪಿ. ಗೋಡೇರ. ಶಾಲೆಯ ಮುಖ್ಯೋಪಾದ್ಯಾಯರಾದ ಬಿ.ಬಿ. ನಾಯಿಕ, ಪರ್ತಕರ್ತರಾದ ಜಿ.ಎಸ್.ರಜಪೂತ ಇದ್ದರು.