RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೋಳಿಸಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ

ಗೋಕಾಕ:ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೋಳಿಸಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ 

ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೋಳಿಸಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 26 :

 

ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೋಳಿಸಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ ಎಂದು ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ದೀಪಿಕಾ ಬಿದರಿ ಹೇಳಿದರು.

ಮಂಗಳವಾರದಂದು ನಗರದಲ್ಲಿ ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಕ್ಷೇತ್ರಗಳಲಿಯ ವ್ಯಕ್ತಿಗಳಿಗೆ ವಿಶೇಷ ತರಬೇತಿ ನೀಡಿ ಬದಲಾವಣೆಯೊಂದಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುವಂತೆ ಸಂಸ್ಥೆಯ ಮಾಡುತ್ತಿದ್ದು, ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆ ಮಾಡಲು ಪ್ರೇರೆಸುತ್ತಿದೆ . ಇಲ್ಲಿನ ಜೆಸಿಐ ಸಂಸ್ಥೆ ಕೊವಿಡ , ಪ್ರವಾಹದಂತ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದ್ದು,ಶೈಕ್ಷಣಿಕ , ಸಾಮಾಜಿಕ,ಆರೋಗ್ಯ ಕ್ರೀಡೆಗಳು ಸೇರಿದಂತೆ ಸಮಾಜ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತಾ ರಾಜ್ಯ ,ರಾಷ್ಟ್ರಮಟ್ಟದಲ್ಲಿ ಪ್ರಶಿದ್ಧಿ ಪಡೆದಿದೆ. ಇನ್ನೂ ಹೆಚ್ಚಿನ ಕಾರ್ಯಗಳೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕೀರ್ತಿ ತರುವಂತೆ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪೌರಾಯುಕ್ತ ಶಿವಾನಂದ ಹಿರೇಮಠ, ಉಪಕಾರಾಗೃಹದ ಅಧೀಕ್ಷಕಿ ಲಕ್ಷ್ಮೀ ಹಿರೇಮಠ, ವಲಯ ಜೆಸಿಐ ಉಪಾಧ್ಯಕ್ಷ ಪ್ರವೀಣ ದೇಶಪಾಂಡೆ, ವಿಷ್ಣು ಲಾತೂರ , ನೂತನ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಕಾರ್ಯದರ್ಶಿ ಸಂತೋಷ ಹವಾಲದಾರ, ಮಹಿಳಾ ಘಟಕದ ಅಧ್ಯಕ್ಷೆ ಭಾಗಿರಥಿ ನಂದಗಾವಿ, ಕಾರ್ಯದರ್ಶಿ ಸುರ್ವಣ ಹವಾಲದಾರ, ಜೂನಿಯರ್ ಜೆಸಿಐ ಅಧ್ಯಕ್ಷೆ ದೀಪ್ತಿ ಅಮ್ಮಣಗಿ , ಕಾರ್ಯದರ್ಶಿ ನಂದಿನಿ ಲಾತೂರ, ಹಿಂದಿನ ಪದಾಧಿಕಾರಿಗಳಾದ ಚಂದ್ರಶೇಖರ ಕಡೇವಾಡಿ, ಶೇಖರ ಉಳ್ಳೇಗಡ್ಡಿ , ನೇತ್ರಾವತಿ ಲಾತೂರ, ಮೀನಾಕ್ಷಿ ಸವದಿ, ಕವಿತಾ ತುಪ್ಪದ ದೀಪಾ ವರ್ಜಿ, ರಾಜೇಶ್ವರಿ ಹಳ್ಳಿ, ಸಂಜೀವ ಜಾಧವ, ರಮಾಕಾಂತ ಕೊಸಂದಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: