ಗೋಕಾಕ:ನಮ್ಮದು ಜಗತ್ತಿನ ಅತೀ ದೊಡ್ಡ ಸಂವಿಧಾನ :ಪ್ರಕಾಶ ಹೋಳೆಪ್ಪಗೋಳ
ನಮ್ಮದು ಜಗತ್ತಿನ ಅತೀ ದೊಡ್ಡ ಸಂವಿಧಾನ :ಪ್ರಕಾಶ ಹೋಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 26 :
ನಮ್ಮದು ಜಗತ್ತಿನ ಅತೀ ದೊಡ್ಡ ಸಂವಿಧಾನ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು.
ಬುಧವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಮತ್ತು ನಗರಸಭೆ ಇವುಗಳ ಆಶ್ರಯದಲ್ಲಿ ಜರುಗಿದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು
ನಮ್ಮದು ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತ ದೇಶ ಇಂದು ಜಗತ್ತಿಗೆ ಮಾದರಿಯಾಗಿದೆ. ಸಮಾಜವಾದ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಮೌಲ್ಯಗಳು ನಮ್ಮ ಸಂವಿಧಾನದ ಕರ್ತವ್ಯಗಳು. ಮೂಲಭೂತ ಹಕ್ಕುಗಳು ಶ್ರೀಸಮಾನ್ಯನ ಸರ್ವತೋಮುಖ ಅಭಿವೃದ್ಧಿಗೆ ಅವಕಾಶಗಳಾಗಿವೆ. ಮೂಲಭೂತ ಕರ್ತವ್ಯಗಳು ವ್ಯಕ್ತಿಯ ಜವಾಬ್ದಾರಿಯನ್ನು ನೆನಪಿಸುತ್ತವೆ. ನಮ್ಮದು ಸಾರ್ವಭೌಮ ರಾಷ್ಟ್ರ . ವಿವಿಧತೆಯಲ್ಲಿ ಏಕತೆ ನೆಲದ ಅನನ್ಯತೆಯಾಗಿದೆ. ಬುದ್ಧ,ಬಸವ ,ಚಂದ್ರಗುಪ್ತ,ಚಾಣಕ್ಯರಂತಹ ಪ್ರವರ್ತಕರು,ಹರಿಹರ,ಬುಕ್ಕ,ವಿದ್ಯಾರಣ್ಯರಂತಹ ಮೇಧಾವಿಗಳು ಜನಿಸಿದ ಪುಣ್ಯ ಭೂವಿ ನಮ್ಮದು. ಇಂತಹ ಪುಣ್ಯ ಭೂವಿಯಲ್ಲಿ ಜನಸಿದ ನಾವು ಸಹ ಪುಣ್ಯವಂತರು ಇವರ ತತ್ವಾರ್ದಶಗಳನ್ನು ನಾವೆಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಭಾರತ ನಿರ್ಮಾಣ ಮಾಡೋಣ ಎಂದ ಅವರು ಒಂದೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ, ಇನ್ನೊಂದೆಡೆ ನೇತಾಜಿ ಸುಭಾಷಚಂದ್ರ ಬೋಸರವರ 125ನೇ ಜನ್ಮ ವರ್ಷಾಚರಣೆ ಈ ಸಂದರ್ಭದಲ್ಲಿ ಎಲ್ಲ ದೇಶಾಭಿಮಾನಿಗಳ ಆದರ್ಶ ಸಂದೇಶಗಳನ್ನು ಸ್ಮರಿಸುತ್ತಾ ಬರಲಿರುವ ದಿನಗಳಲ್ಲಿ ಆತಂಕಗಳು ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರುಳುವಂತಾಗಲಿ ,ಸಂಪನ್ಮೂಲಗಳ ಸರಿಯಾದ ಬಳಕೆಯೊಂದಿಗೆ ಸುಸ್ಥಿರ ಪರಿಸರ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಪ್ರಥಮ ಬಾರಿಗೆ ಸ್ಥಳೀಯ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ಅವರು ಪಥ ಸಂಚಲನಕ್ಕೆ ಕನ್ನಡದಲ್ಲಿ ಕವಾಯತ್ತಿಗೆ ನಿರ್ದೇಶನ ನೀಡಿ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿಧಿಗಳು ಪಿಎಸ್ಐ ಕೆ.ವಾಲಿಕರ ಅವರಿಗೆ ಸತ್ಕರಿಸಿ ,ಗೌರವಿಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ,ಪೌರಾಯುಕ್ತ ಶಿವಾನಂದ ಹಿರೇಮಠ, ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಿಕ , ಸಿಪಿಐಗಳಾದ ಶ್ರೀಶೈಲ ಬ್ಯಾಕೂಡ, ಗೋಪಾಲ ರಾಠೋಡ, ಬಿಇಒ ಜಿ.ಬಿ.ಬಳಗಾರ, ಮುಖಂಡರಾದ ಬಿ.ಆರ್.ಕೊಪ್ಪ, ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಸೋಮಶೇಖರ್ ಮಗದುಮ್ಮ, ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.