RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿದ ಪಿಎಸ್ಐ ಕೆ.ವಾಲಿಕರ ಅವರಿಗೆ ಕರವೇಯಿಂದ ಸತ್ಕಾರ

ಗೋಕಾಕ:ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿದ ಪಿಎಸ್ಐ ಕೆ.ವಾಲಿಕರ ಅವರಿಗೆ ಕರವೇಯಿಂದ ಸತ್ಕಾರ 

ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿದ ಪಿಎಸ್ಐ ಕೆ.ವಾಲಿಕರ ಅವರಿಗೆ ಕರವೇಯಿಂದ ಸತ್ಕಾರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :

 
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಅಧಿಕಾರಿಗಳು ಸಹ ಕೈ ಜೋಡಿಸಬೇಕು ಎಂದು ಕರವೇ ಮುಖಂಡ ಬಸವರಾಜ ಖಾನಪ್ಪನವರ ಹೇಳಿದರು.

73ನೇ ಗಣರಾಜ್ಯೋತ್ಸವದಂದು ನಗರದಲ್ಲಿ ನಡೆದ ಪರೇಡ್ ಸಂದರ್ಭದಲ್ಲಿ ಕನ್ನಡದಲ್ಲಿ ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿದ ಸ್ಥಳೀಯ ಶಹರ ಪೋಲಿಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ಅವರಿಗೆ ಗುರುವಾರದಂದು ಕರವೇ ವತಿಯಿಂದ ಸತ್ಕರಿಸಿ ಅವರು ಮಾತನಾಡಿದರು.

ಕನ್ನಡ ಅನ್ನೋದು ಕೇವಲ ಭಾಷೆಯಲ್ಲ, ಅದು ಕರ್ನಾಟಕದ ಅಸ್ಮಿತೆ. ರಾಜ್ಯ ಉಳಿಯಬೇಕಾದರೆ ಮೊದಲು ಭಾಷೆ ಉಳಿಯಬೇಕು ಎನ್ನುವುದನ್ನು ನಾವೆಲ್ಲರೂ ಅರಿಯಬೇಕು. ಕನ್ನಡ ಸರಳ ಮತ್ತು ಸುಂದರ ಭಾಷೆ. ಮೂರು ಸಾವಿರ ವರ್ಷದಷ್ಟುಇತಿಹಾಸವಿದೆ. ಸುಲಿದ ಬಾಳೆ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಎಂದು 17ನೇ ಶತಮಾನದಲ್ಲೇ ಕವಿ ಮಹಲಿಂಗರಂಗ ಕನ್ನಡದ ಸರಳತೆಯನ್ನು ಹಾಡಿ ಹೊಗಳಿದ್ದಾರೆ. ಇದನ್ನು ಅರಿತು ನಾವೆಲ್ಲರೂ ಆದಷ್ಟು ಮಟ್ಟಿಗೆ ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡವನ್ನು ಬಳಸಬೇಕಾಗಿದೆ‌. ಅಂದಾಗ ಮಾತ್ರ ನಾವು ನಮ್ಮ ಭಾಷೆಯನ್ನು ಬೆಳೆಸಲು ಸಾಧ್ಯ. ಆ ದಿಸೆಯಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಇಲ್ಲಿನ ಪಿಎಸ್ಐ ಕೆ.ವಾಲಿಕರ ಅವರು ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಕನ್ನಡದಲ್ಲಿ ನಿರ್ದೇಶನ ನೀಡಿ ಕನ್ನಡಿಗರಿಗೆ ಮಾದರಿಯಾಗಿದ್ದಾರೆ.
ಪ್ರತಿಯೊಬ್ಬ ಅಧಿಕಾರಿಯೂ ತಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡೆಸಿಕೊಂಡು ಕನ್ನಡದಲ್ಲಿ ವ್ಯವಹರಿಸಿದರೆ ಕನ್ನಡವನ್ನು ಇನ್ನಷ್ಟು ಪರಿಣಾಮವಾಗಿ ಗಟ್ಟಿಯಾಗಿ ಕಟ್ಟಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇಯ ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ರಾಜು ಕೆಂಚನಗುಡ್ಡ, ಮುಗುಟ ಪೈಲವಾನ, ರಪೀಕ ಗುಳೇದ್ದಗುಡ್ಡ , ಆನಂದ ಬಿರಡಿ, ಯಾಸೀನ್ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: