ಗೋಕಾಕ:ಮರಾಠಿ ಪ್ರೇಮ ಮೆರೆದರೆ ನಿಂಬಾಳಕರ ಮನೆ ಮುಂದೆ ಧರಣಿ : ಬಸವರಾಜ ಖಾನಪ್ಪನವರ
ಮರಾಠಿ ಪ್ರೇಮ ಮೆರೆದರೆ ನಿಂಬಾಳಕರ ಮನೆ ಮುಂದೆ ಧರಣಿ : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :
ಕನ್ನಡ ಮಾತನಾಡಲು ಬಾರದವರಿಗೆ ಮರಾಠಿ ಭಾಷೆಯಲ್ಲಿ ದಾಖಲೆಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ಅವರ ಹೇಳಿಕೆ ಖಂಡನೀಯವಾಗಿದೆ ಎಂದು ಕರವೇ ಮುಖಂಡ ಬಸವರಾಜ ಖಾನಪ್ಪನವರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮತಗಳ ಆಸೆಗಾಗಿ ಒಬ್ಬ ಜವಾಬ್ದಾರಿಯುತ್ತ ಸ್ಥಾನದಲ್ಲಿರುವ ಅಂಜಲಿ ನಿಂಬಾಳಕರ ಅವರು ಕನ್ನಡ ಬಾರದವರಿಗೆ ಕನ್ನಡ ಕಲಿಯುವಂತೆ ಹೇಳುವದನ್ನು ಬಿಟ್ಟು ಮರಾಠಿಯಲ್ಲಿ ದಾಖಲೆ ಪೂರೈಸಿ ಎಂದು ಹೇಳಿರುವದು ತರವಲ್ಲ, ಕರ್ನಾಟಕ ರಾಜ್ಯದಲ್ಲಿ ಶಾಸಕಿಯಾಗಿ ಅಧಿಕಾರ ಅನುಭವಿಸುತ್ತಿರುವ ನಿಂಬಾಳಕರ ಅವರು ಮರಾಠಿ ಪ್ರೇಮವನ್ನು ಪ್ರದರ್ಶಿಸುವದನ್ನು ಬಿಟ್ಟು ಕನ್ನಡದಲ್ಲಿ ವ್ಯವಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಶಾಸಕಿ ನಿಂಬಾಳಕರ ಮನೆ ಮುಂದೆ ಕರವೇ ಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಖಾನಪ್ಪನವರ ಎಚ್ಚರಿಕೆ ನೀಡಿದ್ದಾರೆ.