ಘಟಪ್ರಭಾ:ಗೋಕಾಕ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವಲ್ಲಿ ರಮೇಶ ಜಾರಕಿಹೊಳಿ ಅವರ ಪಾತ್ರ ಮಹತ್ವದಾಗಿದೆ : ಬಿಇಒ ಅಜೀತ
ಗೋಕಾಕ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವಲ್ಲಿ ರಮೇಶ ಜಾರಕಿಹೊಳಿ ಅವರ ಪಾತ್ರ ಮಹತ್ವದಾಗಿದೆ : ಬಿಇಒ ಅಜೀತ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 30 :
ಗೋಕಾಕ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವಲ್ಲಿ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರ ಪಾತ್ರ ಮಹತ್ವದಾಗಿದೆ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಹೇಳಿದರು.
ಅವರು ಶನಿವಾರದಂದು ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪೂರ ಪಿ.ಜಿ,ಯಲ್ಲಿ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ, ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಶಿಥಿಲಗೊಂಡ ಕೋಣೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಸಿದ ಶಾಸಕರು ಕೂಡಲೇ ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡಿಸಿ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆಂದು ಹೇಳಿದರು.
ನೂತನ ಕೊಠಡಿಗಳನ್ನು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಗಣ್ಯರಾದ ಡಿ.ಎಮ್.ದಳವಾಯಿ, ರಾಮಣ್ಣ ಹುಕ್ಕೇರಿ, ತಾಲೂಕು ಬಿಸಿ ಊಟದ ನಿರ್ದೇಶಕ ಮಲಬಣ್ಣವರ, ಸಿ.ಆರ್.ಪಿ ರಂಗಪ್ಪ ಗೋಡೇರ, ಪ್ರಧಾನ ಗುರುಮಾತೆ ಕಳಸನ್ನವರ, ನಿವೃತ್ತ ಶಿಕ್ಷಕರಾದ ಈಶ್ವರ ರಾಜಾಪೂರೆ, ಎಸ್.ಡಿ.ಎಮ್.ಸಿ ಅಧ್ಯಕ್ಷ ವಿಠ್ಠಲ ನಿಡಸೋಸಿ, ಸುರೇಶ ಕರೋಶಿ, ಶ್ರೀಕಾಂತ ಮಹಾಜನ ಇದ್ದರು.
ಶಾಲೆಯ ಪರವಾಗಿ ಅಂಬಿರಾವ ಪಾಟೀಲ ಹಾಗೂ ಇತ್ತಿಚಿಗೆ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾದ ಕು.ಚೈತ್ರಾ ಗಿಡ್ಡೂರ ಅವರನ್ನು ಸತ್ಕರಿಸಲಾಯಿತು. ಶಾಲೆಯ ಎಲ್ಲ ಶಿಕ್ಷಕ ವೃಂದವರು ಎಸ್.ಡಿ.ಎಮ್.ಸಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.