ಗೋಕಾಕ:ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 1:
ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರದಂದು ನಗರದಲ್ಲಿ ಪ್ರತಿಭಟನೆ ನಡೆಯಿಸಿ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ಮುಖಂಡ ಬಸವರಾಜ ಖಾನಪ್ಪನವರ ಕಳೆದ ಹಲವಾರು ತಿಂಗಳುಗಳಿಂದ ಗೋಕಾಕ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಪತ್ರಕರ್ತರ ಸೋಗಿನಲ್ಲಿ ಹಗಲು ದರೋಡೆಕೋರರು ಸರಕಾರಿ ನೌಕರರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆಯನ್ನು ನೀಡುತ್ತಿದ್ದಾರೆ.ಇದರಿಂದ ಸರಕಾರಿ ನೌಕರರು ಹಾಗೂ ವ್ಯಾಪರಸ್ಥರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ನಕಲಿ ಪತ್ರಕರ್ತರನ್ನು ಗುರಿಯಾಗಿಸಿ ಮುಂದಿನ ದಿನಗಳಲ್ಲಿ ಅಂತಹ ನಕಲಿ ಪತ್ರಕರ್ತರ ಮನೆಗಳ ಮುಂದೆ ಕರವೇ ಯಿಂದ ಪ್ರತಿಭಟನೆ ಹಮ್ಮಿಕೊಂಡು ನಕಲಿ ಪತ್ರಕರ್ತರ ಮುಖಕ್ಕೆ ಕಪ್ಪು ಮಸಿ ಬಳೆಯಲಾಗುವದು . ನೊಂದಣಿ ಹೊಂದದ ಅನಧಿಕೃತ ಪತ್ರಿಕೆಯಯನ್ನು ಹಿಡಿದುಕೊಂಡು ಗ್ರಾಮೀಣ ಮತ್ತು ನಗರ ಪ್ರದೇಶದ ಕಛೇರಿಗಳಿಗೆ ಭೇಟಿ ನೀಡಿ ಕರ್ತವ್ಯ ನಿರತ ಅಧಿಕಾರಿಗಳನ್ನು ಬೆದರಿಸಿ ಹಣದ ಬೇಡಿಕೆ ಇಡುವುದು, ಅವರ ಹಣ ನೀಡಲು ನಿರಾಕರಿಸಿದರೆ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸಬುಕ್ಕ ಹಾಗೂ ಯೂಟ್ಯೂಬ್ ಗಳಲ್ಲಿ ಹರಿಬಿಡುವದು, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೇಳಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣವನ್ನು ದೋಚುವ ಕಾರ್ಯ ಬೇರೆ ಕಡೆಯಿಂದ ಬಂದು ಗೋಕಾಕ ತಾಲೂಕಿನಲ್ಲಿ ಅವ್ಯಾಹತವಾಗಿ ಸಾಗಿದೆ. ಇದರಿಂದ ಕಛೇರಿಗಳಲ್ಲಿ ನೌಕರರು ಕರ್ತವ್ಯ ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ.
ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿಯೂ ಸಹ ನಕಲಿ ಪತ್ರಕರ್ತರು ಮಧ್ಯವರ್ತಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಟ್ಟು ಅಧಿಕಾರಿಗಳಿಗೆ ಹಾಗೂ ದೊಡ್ಡ ,ದೊಡ್ಡ ವ್ಯಾಪಾರಸ್ಥರಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ. ರಾತ್ರಿ ಹೊತ್ತು ರಸ್ತೆಗಳಲ್ಲಿ ಗುಂಪು ಗಟ್ಟಿ ನಿಂತು ಗಾಡಿಗಳನ್ನು ಹಿಡಿದು ವಿಡಿಯೋ ಮಾಡಿ
ಎಲ್ಲಿಂದ ಬಂದಿರಿ ,ಎಲ್ಲಿಗೆ ಹೋಗುತ್ತಿದ್ದಿರಿ , ಗಾಡಿಯಲ್ಲಿ ಏನು ಇದೆ, ಎಷ್ಟು ಟನ್ ಮಾಲ ಇದೆ. 10 ಟನ್ ಲೋಡ ಮಾಡಬೇಕಾದ ಗಾಡಿಯಲ್ಲಿ 14 ಟನ್ ಲೋಡ ಮಾಡಲಾಗಿದೆ. ನಿಮ್ಮ ಗಾಡಿಯನ್ನು ಪೊಲೀಸರಿಗೆ ಒಪ್ಪಿಸುತ್ತೇವೆ ಇಲ್ಲಿದಿದ್ದರೆ ಹಣ ನೀಡಿ ಎಂದು ರಾತ್ರಿ ರಸ್ತೆಯಲ್ಲಿ ನಿಂತು 10 ಸಾವಿರ , 20 ಸಾವಿರ ಹಣ ದರೋಡೆ ಮಾಡುತ್ತಿರುವ ಘಟನೆಗಳು ಗೋಕಾಕ ಶಹರ , ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಷ್ಟೇ ಅಲ್ಲ ಇಡೀ ಜಿಲ್ಲೆಯಲ್ಲಿ ನಡೆದಿವೆ ಇದರಿಂದ ವ್ಯಾಪಾರಸ್ಥರು ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
( ಆರ್.ಎನ್.ಐ ) ರಜಿಸ್ಟರ ನ್ಯೂಸ್ ಪೇಪರ ಆಫ ಇಂಡಿಯಾ ) ಕಾಯ್ದೆಯಡಿ ಯಾವುದೇ ನೊಂದಣಿ ಇಲ್ಲದ ಒಂದೇ ಪತ್ರಿಕೆಯ ಹೆಸರು ಹೇಳಿ ಹಲವಾರು ಜನರು 5 ಸಾವಿರ 10 ಸಾವಿರ ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದಿದ್ದರೆ ಲೋಕಾಯುಕ್ತರಿಗೆ ದೂರು ನೀಡುತ್ತೇನೆ ಎಂದು ಬೆದರಿಸಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಯೂಟ್ಯೂಬ್ , ಪೇಸ್ಬುಕ್ಕ ಹಾಗೂ ಇನ್ನೀತರ ಸಾಮಾಜಿಕ ಜಾಲತಾಣಗಳು ಜನರನ್ನು ಸುಲಭ ಸಾಧನಗಳಾಗಿದ್ದು, ಇವುಗಳ ದುರುಪಯೋಗ ಪಡೆಸಿಕೊಂಡು ಇವುಗಳಿಗೆ ಚಾಲನಗಳ ಹೆಸರುಗಳನ್ನು ನೀಡಿ ನಾವು ಚಾಲನಗಳ ಎಂ.ಡಿ ಗಳು , ವರದಿಗಾರರು ಎಂದು ಹೇಳಿ ಉದ್ದೂದ ಐಡಿ ಕಾರ್ಡಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಹನಿಟ್ಯಾಫ್ ಮಾಡುವ ನಕಲಿ ಪತ್ರಕರ್ತರು ಗೋಕಾಕ ಸೇರಿದಂತೆ ಜಿಲ್ಲೆಯಾದ್ಯಂತ ಹಗಲು ದರೋಡೆ ಮಾಡುತ್ತಿದ್ದಾರೆ. ಇಂತಹ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಇವರ ಮೇಲೆ ಕ್ರೀಮಿನಲ್ ದಾಖಲಿಸಬೇಕು ಎಂದು ಖಾನಪ್ಪನವರ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಹಾದೇವ ಮಕ್ಕಳಗೇರಿ, ಅಜೀಜ ಮೋಕಾಶಿ , ಮಲ್ಲು ಸಂಪಗಾರ, ಹನಿಫ ಸನದಿ, ಮುಗುಟ ಪೈಲವಾನ, ರಫೀಕ್ ಗುಳೆದ್ದಗುಡ್ಡ , ಅಬ್ಬು ಮುಜಾವರ,ಬಸವರಾಜ ಗಾಡಿವಡ್ಡರ, ಕೆಂಪ್ಪಣ್ಣಾ ಕಡಕೋಳ , ಸಂಜು ಗಾಡಿವಡ್ಡರ , ಗಣಪತಿ ಜಾಗನೂರ , ರಫೀಕ ಗುಳ್ಳೆದಗುಡ್ಡ , ಅಬ್ಬು ಮುಜಾವರ , ಸತ್ತಾರ ಬೇಪಾರಿ ಶಿವಾನಂದ ಅಕ್ಕೆನವರ , ನಿಂಗಪ್ಪಾ ಬಡಕುಂದ್ರಿ , ನಾಗೇಶ ಮಕ್ಕಳಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.