ಗೋಕಾಕ:ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಗೋಕಾಕ ವಲಯ ಇಡೀ ಶೈಕ್ಷಣಿಕ ಜಿಲ್ಲೆಗೆ ಮಾದರಿಯಾಗಿದೆ : ಡಿಡಿಪಿಐ ಹಂಚಾಟೆ
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಗೋಕಾಕ ವಲಯ ಇಡೀ ಶೈಕ್ಷಣಿಕ ಜಿಲ್ಲೆಗೆ ಮಾದರಿಯಾಗಿದೆ : ಡಿಡಿಪಿಐ ಹಂಚಾಟೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 8 :
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಗೋಕಾಕ ವಲಯ ಇಡೀ ಶೈಕ್ಷಣಿಕ ಜಿಲ್ಲೆಗೆ ಮಾದರಿಯಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.
ಸೋಮವಾರದಂದು ಸಾಯಂಕಾಲ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಮಿಸ್ ಕಾಲ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಉತ್ತಮ ಪರಿಸರ ಇದ್ದರೆ ಏನೇಲ್ಲಾ ಸಾಧಿಸಲು ಸಾಧ್ಯ ಆ ನಿಟ್ಟಿನಲ್ಲಿ ಜಿಲ್ಲೆಯಯ ಎಲ್ಲಾ ಶಾಲೆಗಳಲ್ಲಿ ಉತ್ತಮ ಪರಿಸರ ನಿರ್ಮಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಾಗಿದೆ ಇದಕ್ಕೆ ಇಲಾಖೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲು ಕಂಕಣಬದ್ದವಾಗಿದೆ.
ಗೋಕಾಕ ವಲಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಗೋಕಾಕ ಬಿಇಒ ಉತ್ತಮವಾದ ಶಿಕ್ಷಕರ ತಂಡ ಕಟ್ಟಿಕೊಂಡು ಕಾರ್ಯ ನಿರ್ವಹಿಸುತ್ತಿರುವದರಿಂದ ಮಕ್ಕಳ ಭೌದಿಕ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗಿದೆ . ವಿದ್ಯಾರ್ಥಿಗಳಲ್ಲಿ ಕಲಿಕೆಯ ಬೇರುಗಳನ್ನು ಗಟ್ಟಿಗೋಳಿಸುವ ಕಾರ್ಯ ಶಿಕ್ಷಕರು ಮಾಡಬೇಕು. ಇದರಿಂದ ಮಕ್ಕಳು ಕ್ರೀಯಾತ್ಮಕವಾಗಿ ಹೆಚ್ಚಿನ ಸಮಯವನ್ನು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಕ್ರೀಯಾತ್ಮಕ ಚುಟುವಟಿಕೆಗಳು ವರ್ಷವಿಡೀ ನಡೆಸಲು ಶಿಕ್ಷಕರು ಮಾನಸಿಕವಾಗಿ ಸಿದ್ಧರಾದಾಗ ಮಾತ್ರ ನಾವು ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯ ಆ ದಿಸೆಯಲ್ಲಿ ಎಲ್ಲಾ ಶಿಕ್ಷಕರು ಮುಂದಾಗಿ ಮಕ್ಕಳು ಒಳ್ಳೆಯ ಭವಿಷ್ಯ ನಿರ್ಮಿಸಿಕೊಳ್ಳಲು ಸಹಕಾರಿಯಾಗಬೇಕು ಎಂದು ಹೇಳಿದರು. ತಂತ್ರಜ್ಞಾನದ ಸರಿಯಾದ ಉಪಯೋಗದೊಂದಿಗೆ ಗೋಕಾಕ ವಲಯದಲ್ಲಿ ನಡೆಯುವ ಶೈಕ್ಷಣಿಕ ಚುಟುವಟಿಕೆಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಕೊಳ್ಳವಂತೆ ಡಿಡಿಪಿಐ ಹಂಚಾಟೆ ಇದೇ ಸಂದರ್ಭದಲ್ಲಿ ಕರೆ ನೀಡಿದರು .
ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿದರು, ಶಿಕ್ಷಣ ಸಂಯೋಜಕ ಎನ್.ಆರ್.ಪಾಟೀಲ ವಂದಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಉಪ ಪ್ರಾಚಾರ್ಯ ಗೋಪಾಲ ಮಾಳಗಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ.ಎಂ ಪಾಟೀಲ, ಎಸ್.ಎಸ್.ಎಲ್. ಸಿ ನೋಡಲ್ ಅಧಿಕಾರಿ ಬಿ.ಎಂ ವಣ್ಣೂರ, ಮುಖ್ಯೋಪಾಧ್ಯಾಯನಿ ಸಿ.ಬಿ.ಪಾಗದ ಉಪಸ್ಥಿತರಿದ್ದರು.