RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು : ಬಿಇಒ ಜಿ.ಬಿ.ಬಳಗಾರ

ಗೋಕಾಕ:ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು : ಬಿಇಒ ಜಿ.ಬಿ.ಬಳಗಾರ 

ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು : ಬಿಇಒ ಜಿ.ಬಿ.ಬಳಗಾರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 8 :

 

ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು

ಮಂಗಳವಾರದಂದು ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ವಲಯದ 1ನೇ ತರಗತಿಯಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕಣ್ಣು ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತಿದ್ದು, ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯ ಸುಧಾರಣೆಗೆ ಹೆಚ್ಚಿನ ಮಹತ್ವ ನೀಡಿ ಇಂತಹ ಶಿಬಿರಗಳ ಸದುಪಯೋಗವನ್ನು ಪಡೆಸಿಕೊಳ್ಳಬೇಕು‌. ಉತ್ತಮ ಆರೋಗ್ಯದಿಂದ ಸಾಧಕರಾಗಲು ಸಾಧ್ಯ. ನಿಮಗೆ ಶಿಕ್ಷಣ ಇಲಾಖೆ ,ಸಮಾಜ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದು, ಇವೆಲ್ಲಗಳ ಪ್ರಯೋಜನೆಗಳಿಂದ ಪ್ರತಿಭಾವಂತರಾಗಿರೆಂದು ಹಾರೈಸಿದರು.

ರೋಟರಿ ಸಂಸ್ಥೆಯ ಸೋಮಶೇಖರ್ ಮಗದುಮ್ಮ ಮಾತನಾಡಿ ಪೊಲಿಯೋ ರೋಗ ನಿರ್ಮೂಲನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ, ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ಈ ಬಾರಿ ಉಚಿತವಾಗಿ 1 ಲಕ್ಷ ಕನ್ನಡಕಗಳನ್ನು ನೀಡುವ ಯೋಜನೆ ರೂಪಿಸಿದ್ದು, 15 ದಿನಗಳ ಒಳಗಾಗಿ ಅವಶ್ಯಕ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ, ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ ವರದಾಯಿ, ಪದಾಧಿಕಾರಿಗಳಾದ ದಿಲೀಪ್ ಮೆಳವಂಕಿ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಉದಯ ಹುಕ್ಕೇರಿ, ಸತೀಶ ನಾಡಗೌಡ, ನೇತ್ರತಜ್ಞರಾದ ಡಾ.ಸಂವೇಧಾ , ಡಾ.ಉದಯ ಅಲಾಸಿ ಇದ್ದರು.

Related posts: