RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸತೀಶ ಜಾರಕಿಹೊಳಿ ಫೌಂಡೇಶನ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಕೆ

ಗೋಕಾಕ:ಸತೀಶ ಜಾರಕಿಹೊಳಿ ಫೌಂಡೇಶನ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಕೆ 

ಸತೀಶ ಜಾರಕಿಹೊಳಿ ಫೌಂಡೇಶನ  ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಕೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 19 :

ಇಲ್ಲಿನ  ಸತೀಶ ಜಾರಕಿಹೊಳಿ ಫೌಂಡೇಶನ  ವತಿಯಿಂದ ನಗರದ ಮಯೂರ ಶಾಲಾ ಮೈದಾನದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಸುವ ಕಾರ್ಯಕ್ರಮಕ್ಕೆ ಶನಿವಾರದಂದು ನಗರದಲ್ಲಿ  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.

ಇ ಸಂದರ್ಭದಲ್ಲಿ  ಮಾತನಾಡಿದ ಅವರು, ಇಂದು ಬೇಸಿಗೆಯಲ್ಲಿ ಪ್ರಾಣಿ ಹಾಗೂ ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರದಾಡುತ್ತಿವೆ.  ಇಂಥ ಸಂದರ್ಭದಲ್ಲಿ ಜಾನುವಾರಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುವ ಜನರು ಇಂತಹ ಕಾರ್ಯ ಮಾಡಲು ಪಣ ತೊಡಬೇಕು ಎಂದರು.
  ಈ ಸಂದರ್ಭದಲ್ಲಿ  ಪೌಂಡೇಶನ್ ಅಧ್ಯಕ್ಷ ಮುನ್ನಾ ಸೌದಾಗರ, ಜುಬೇರ್‌ ಮಿರ್ಜಾಭಾಯಿ, ರಾಜು ಮುಲ್ಲಾ, ಪ್ರವೀಣ ಕಳ್ಳೀಮನಿ, ಅಲಿ ನದಾಫ್‌, ಅರುಣ ಪ್ರೇಮಕುಮಾರ, ಸಾಮ್ರಾಜ್ಯ ಭಜಂತ್ರಿ, ಸತೀಶ್‌ ಕೊಳಕಿ, ಜುನೇದ್‌ ಮಿರ್ಜಾಭಾಯಿ,  ಪಾಂಡು ಮನ್ನೀಕೇರಿ, ಶಿವು ಪಾಟೀಲ, ರಿಯಾಜ್‌ ಚೌಗಲಾ  ಸೇರಿದಂತೆ ಇತರರು ಇದ್ದರು.

Related posts: