RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಸಚಿವ ಕೆ.ಎಸ್.ಈಶ್ವರಪ್ಪ ಮೂಡಲಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಮೂಡಲಗಿ:ಸಚಿವ ಕೆ.ಎಸ್.ಈಶ್ವರಪ್ಪ ಮೂಡಲಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ 

ಸಚಿವ ಕೆ.ಎಸ್.ಈಶ್ವರಪ್ಪ ಮೂಡಲಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಫೆ 21 :

 

ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಅರಭಾವಿ ಮತ್ತು ಕೌಲಜಗಿ ಕಾಂಗ್ರೇಸ್ ಬ್ಲಾಕ್ ಕಮಿಟಿಯಿಂದ ಸೋಮವಾರ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಡಿ.ಜಿ.ಮಹಾತ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಮಾತನಾಡಿ, ದೇಶದಲ್ಲಿ ರಾಷ್ಟ್ರ ಧ್ವಜವನ್ನು ತಾಯಿಗೆ ಸಮಾನವಾಗಿ ಗೌರವಿಸಲಾಗುತ್ತಿದೆ. ಹರುಕು ಬಾಯಿ ಸಚಿವ ಈಶ್ವರಪ್ಪ ಅವರು ರಾಷ್ಟç ಧ್ವಜಕ್ಕೆ ಅಪಮಾನ ಮಾಡಿರುವ ಹಿನ್ನೆಲೆ ಈಶ್ವರಪ್ಪ ವಿರುದ್ದ ಪೊಲೀಸರು ದೇಶದ್ರೋಹ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಳ್ಳಬೇಕು. ಸಚಿವರಾಗಿ ಹೀಗೆ ಮಾತನಾಡಿರುವುದು ಸರಿಯಲ್ಲ ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ಈಶ್ವರಪ್ಪ  ಅವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.
ಬಿ.ಬಿ.ಬೆಳಕೂಡ ಮಾತನಾಡಿ, ಇವತ್ತೆ ಈಶ್ವರಪ್ಪ ಅವರನ್ನು ವಜಾಮಾಡಿ ಜನರ ತೇರೆಗೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ರಾಜ್ಯದ ಜನರ ಹಿತ ಕಾಪಾಡುವ ಬಗ್ಗೆ ಕಲಾಪದಲ್ಲಿ ಅನೇಕ ಚರ್ಚೆನಡೆಸಬೇಕಾಗಿದೆ,  ಆದರೆ ಒಬ್ಬರಿಗೋಸ್ಕರ ಕಲಾಪದಲ್ಲಿ ಚರ್ಚೆಯಾಗದಿರುವ ವಿಷಾದಕರ ಸಂಗತಿ, ರಾಷ್ಟçಕ್ಕೆ ಅಪಮಾನ ಮಾಡಿರುವ ಈಶ್ವರಪ್ಪಗೆ ಬಿಜೆಪಿ ಸರಕಾರ ಬೆಂಬಲಕ್ಕೆ ನಿಂತಿರುವುದು ಖಂಡನಿಯ ಎಂದರು.
  ಬಿ.ಬಿ.ಹಂದಿಗುಂದ ಮಾತನಾಡಿ, ನಮ್ಮ ದೇಶಕ್ಕೆ, ರಾಷ್ಟçಧ್ವಜಕ್ಕೆ ಅವಮಾನ ಮಾಡು ರೀತಿಯಲ್ಲಿ ಮತುಗಳನ್ನಾಡಿ ದೇಶದಲ್ಲಿ ಹಗೂ ರಾಜ್ಯದಲ್ಲಿ ಕೋಮುಸೌದಾರ್ಹತೆ ಕದಡುವ ರೀತಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರನ್ನು ಶ್ರೀಘ್ರವಾಗಿ ಸಂಪುಟದಿಂದ  ವಜಾ ಮಾಡಬೇಕೆಂದರು,
ಕಾಂಗ್ರೇಸ ಮುಖಂಡರಾದ ಎಸ್.ಆರ್.ಸೋನವಾಲ್ಕರ, ಸಿದ್ದಪ್ಪ ಮುಂಡಗಿನಾಳ, ಮಂಜು ಮಸಗುಪ್ಪಿ, ಅರಭಾವಿ ಬ್ಲಾಕ್ ಅಧ್ಯಕ್ಷ ಗುರುರಾಜ ಪೂಜೇರಿ ಮಾತನಾಡಿ, ಈಶ್ವರಪ್ಪ ಅವರು ರಾಜೀನಾಮೆ ಕೊಡುವರೆಗೂ ಕಾಂಗ್ರೇಸ್ ಕಾರ್ಯಕರ್ತರ ಈ ಹೋರಾಟ ಹೀಗೆ ಮುಂದು ವರೆಯುತ್ತದೆ. ಶೀಘ್ರವಾಗಿ ಈಶ್ವರಪ್ಪ ಅವರ ವಿರುದ್ದ ಕಾನೂನು ಸೂಕ್ತ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿ, ರಾಜ್ಯದ ಜನತೆಯ ಕುಂದುಕೊರತೆಗಳ ಬಗ್ಗೆ ಸುಗಮ ಕಲಾಪ ನಡೆಸಲು ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆಯಲ್ಲು ಮುಂದಾಗಬೇಕೆಂದರು.
ಈ ಪ್ರತಿಭಟನೆಯಲ್ಲಿ ಅರಭಾವಿ ಬ್ಲಾಕ್ ಅಧ್ಯಕ್ಷ ಗುರುರಾಜ ಪೂಜೇರಿ, ಕೌಜಲಗಿ ಬ್ಲಾಕ್ ಅಧ್ಯಕ್ಷ  ಲಗಮನ್ನ ಕಳಸನ್ನವರ, ಮಹಿಳಾ ಬ್ಲಾಕ್ ಅಧ್ಯಕ್ಷೆ ಸುಜಾತಾ ಹಿರೇಮಠ, ಮಾರುತಿ ಮಾವರಕರ, ಶ್ರೀಕಾಮತ ದೇವರಮನಿ, ಶ್ರೀನಾಥ ಕರಿಹೊಳಿ, ಕುಮಾರ ಕಾತರಕಿ, ಶ್ರೀಕಾಂತ ಕರಿಗಾರ, ಸುನೀಲ ಯತ್ತಿನಮನಿ, ನಾಗೇಂದ್ರ ಕಬ್ಬೂರ, ಭೀಮಶಿ ದೊಡ್ಡಮನಿ ಹಾಗೂ ಅನೇಕ ಕಾರ್ಯಕರ್ತರು ಇದ್ದರು.

Related posts: