ಗೋಕಾಕ:ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ: ಗೋಕಾಕದಲ್ಲಿ ಶ್ರೀ ರಾಮಸೇನೆ ಕರ್ನಾಟಕ ಕಾರ್ಯಕರ್ತರ ಪ್ರತಿಭಟನೆ
ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ: ಗೋಕಾಕದಲ್ಲಿ ಶ್ರೀ ರಾಮಸೇನೆ ಕರ್ನಾಟಕ ಕಾರ್ಯಕರ್ತರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :
ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷನ ಹತ್ಯೆಯನ್ನು ಖಂಡಿಸಿ ಇಲ್ಲಿನ ಶ್ರೀ ರಾಮ ಸೇನೆ ಕರ್ನಾಟಕ ಕಾರ್ಯಕರ್ತರು ಮಂಗಳವಾರದಂದು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಿನ್ನೆ ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತ ಹರ್ಷ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಆ ಯುವಕನಿಗೆ ಎಸ್.ಡಿ.ಪಿ.ಐ , ಪಿ.ಎಫ್.ಐ , ಸಿ.ಎಫ್.ಐ ಸಂಘಟನೆಗಳು ಹತ್ಯೆಗೆ ಪ್ರಯತ್ನ ನಡೆಸಿದ್ದರು ರಕ್ಷಣೆ ನೀಡದಿರುವುದು ಸರಕಾರದ ನಾಚಿಕೆಗೇಡಿ ಸಂಗತಿಯಾಗಿದೆ. ಹಿಂದುಗಳ ಹತ್ಯೆ ಅವ್ಯಾಹತವಾಗಿ ನಡೆದಿದ್ದರೂ ಸರಕಾರ ದಿವ್ಯ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ವಿರೋಧ ಪಕ್ಷದಲ್ಲಿದ್ದಾಗ ಈ ಸಂಘಟನೆಗಳನ್ನು ನಿಷೇಧಿಸುವದಕ್ಕೆ ಆಗ್ರಹಿಸಿ ಈಗ ಅಧಿಕಾರದಲ್ಲಿದ್ದರೂ ನಿಷೇಧಿಸದಿರುವದು ಸರಕಾರದ ಮೇಲೆ ಸಂಶಯ ಮೂಡುತ್ತಿದೆ.ತಕ್ಷಣ ಈ ಸಂಘಟನೆಗಳನ್ನು ನಿಷೇಧಿಸಬೇಕು ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು. ಮೃತನ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರ ನೀಡಬೇಕು. ಹಿಂದು ಕಾರ್ಯಕರ್ತರಿಗೆ, ಹಿಂದು ನಾಯಕರಿಗೆ ಸೂಕ್ತ ಭದ್ರತೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಕರ್ನಾಟಕ ತಾಲೂಕು ಅಧ್ಯಕ್ಷ ರವಿ ಪೂಜೇರಿ, ಮುಖಂಡರಾದ ಶಿವು ಹಿರೇಮಠ, ಸಂತೋಷ ನಾಯಿಕ, ರಮೇಶ ಸಂಗಪಾಳೆ, ಪ್ರವಿಣ ಬೆಕ್ಕೇರಿ, ಪ್ರವಿಣ ಹೂವನ್ನವರ, ಶಿವು ಪೂಜೇರಿ, ರಾಮು ತೋಳಿ ಸೇರಿದಂತೆ ಅನೇಕರು ಇದ್ದರು.