RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

ಗೋಕಾಕ:ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ 

ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 25 :

 
ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ ವತಿಯಿಂದ ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆಯನ್ನು ನಡೆಸಿದರು.
ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲಗಳ ನೂರಾರೂ ಕಾರ್ಯಕರ್ಯರು ಸೇರಿ ಜಾಗ್ರತೆ ಸಭೆಯಲ್ಲಿ ಕಾಂಗ್ರೇಸ ಪಕ್ಷದ ಜನ ವಿರೋದಿ ನೀತಿ ಕುರಿತು ಮಾತನಾಡಿದರು.
ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮಾತನಾಡುತ್ತಾ ನಾಡಿನ ಅಭಿವೃದ್ಧಿ ಹಾಗೂ ಹಿತಚಿಂತನೆಯ ವೇದಿಕೆಯಾಗಿರುವ ವಿಧಾನ ಸಭೆಯ ಅಧಿವೇಶನವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿ ಕೊಟಿರುವ ಕಾಂಗ್ರೇಸ ಪಕ್ಷ ತನ್ನ ವೈಚಾರಿಕ ಮತ್ತು ಬೌದ್ದಿಕ ದಿವಾಳಿತನವನ್ನು ಕಲಾಪಗಳನ್ನು ಹಾಳುಗೆಡುವ ಮೂಲಕ ಬಹಿರಂಗಗೊಳಿಸಿದೆ. ಹಿಜಾಬ ಮತ್ತು ಸಮವಸ್ತ್ರ ವಿಷಯದಲ್ಲಿ ಕಾಂಗ್ರೇನ ಗೊಂದಲದ ನಿಲುವಿನಿಂದ ಆಗಿರುವ ಹಾನಿ ಸರಿಪಡಿಸಿಕೊಳ್ಳುವ ಮತ್ತು ಜನರ ಗಮನವನ್ನು ಬೇರೆಡೆ ಸೇಳೆಯುವ ಸ್ವಾರ್ಥ ಹುನ್ನಾರಕ್ಕಾಗಿ ರಾಜ್ಯದ ಮಹತ್ವದ ಅಧಿವೇಶನವನ್ನು ವ್ಯರ್ಥ ಮಾಡಿರುವುದು ಕಾಂಗ್ರೇಸ ಪಕ್ಷವು ರಾಜ್ಯದ ಜನತೆಗೆ ಮಾಡಿರುವ ದ್ರೋಹವಾಗಿದೆ. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡದೆ ಬಿಜೆಪಿ ಕಾರ್ಯಕರ್ತರ ಮೇಲೆ ಅಂದಿನ ಕಾಂಗ್ರೇಸ ಸರಕಾರ ಗೋಲಿಬಾರ ನಡೆಸಿತ್ತು. ಇಂದು ರಾಷ್ಟ್ರಧ್ವಜದ ಬಗೆಗೆ ಅತೀ ಗೌರವದ ನಾಟಕವಾಡುತ್ತಾ ವಿಧಾನ ಸೌದದ ಅಂಗಳದಲ್ಲಿ ಹಗಲು ರಾತ್ರಿ ಧರಣಿ ನಡೆಸಿ ಕೊನೆಗೆ ಅದರಿಂದ ಲಾಭವಾಗುತ್ತಿಲ್ಲ ಎಂಬುದರ ಅರಿವಾಗಿ ಕೊನೆಗೆ ಅಧಿವೇಶನ ಮುಂದುಡಿದರೆ ಸಾಕಪ್ಪಾ ಎನ್ನುವ ಹೀನಾಯ ಸ್ಥಿತಿಗೆ ಕಾಂಗ್ರೇಸ ಪಕ್ಷ ತಲುಪಿದೆ ಎಂದರು.
ಕೊರೋನಾ ಅಲೆ ತೀವ್ರವಾಗಿದ್ದಾಗಲು ಮೇಕೆದಾಟುವಿನ ಹಟಮಾರಿತನದ ಪಾದಯಾತ್ರೆ ನಿಲ್ಲಿಸಿದರೆ ಸಾಕಪ್ಪ ಎನ್ನುವ ಹತಾಸೆ ಸ್ಥಿತಿಗೆ ಕಾಂಗ್ರೇಸ ಪಕ್ಷ ತಲುಪಿ ಮುಖಭಂಗಕ್ಕೆ ವಳಗಾಗುತ್ತಿದೆ.ಜನತೆ ಇಂತಹ ವದಂತಿಗಳಿಗೆ ಮಹತ್ವ ನೀಡದೆ ರಾಜ್ಯದ ಅಭಿವೃದ್ಧಿ ಹಾಗು ಶಾಂತಿಗೆ ಸಹಕಾರ ನೀಡುವಂತೆ ಕೊರಿದರು.
ಬಾಕ್ಸ: ರಮೇಶ್ ಜಾರಕಿಹೊಳಿ ಗ್ರಹ ಕಛೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ವೃತ್ತಕ್ಕೆ ತೆರಳಿ ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿ ಖಂಡಿಸಿ, ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸದನ ಕಲಾಪ ಹಾಳು ಮಾಡಿದ್ದು, ನಿದ್ದೆ ಮಾಡಿದ್ದು, ಭೋಜನ ಮಾಡಿ ಜನರ ತೆರಿಗೆ ಹಣ ಪೆÇೀಲು ಮಾಡಿದ್ದು, ಸದನದಲ್ಲಿ ಡಿಕೆ ಶಿವಕುಮಾರ ಗುಂಡಾಗಿರಿ ಮಾಡಿದ್ದು ಖಂಡಿಸಿ ಕಾಂಗ್ರೆಸ್ ವಿರುದ್ಧ ಹಾಗೂ ಡಿಕೆಶಿ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರ ಸಭೆ ಅಧ್ಯಕ್ಷ ಜಯಾನಂದ ಹುಂಚ್ಚಾಳ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮೀತಿ ಚೇರಮೆನ ಕುತುಬುದ್ದಿನ ಗೋಕಾಕ, ಮುಖಂಡರಾಂದ ಎಸ್ ವಿ ದೇಮಶೇಟ್ಟಿ, ಪ್ರೇಮಾ ಭಂಡಾರಿ, ರಾಜೇಶ್ವರಿ ವಡೆಯರ, ಶ್ರೀದೇವಿ ತಡಕೊಡ, ಮಂಜುನಾಥ ಪ್ರಭುನಟ್ಟಿ, ಲಕ್ಷ್ಮಣ ಖಡಕಬಾಂವಿ, ರವಿ ಮಂಡೆಪ್ಪಗೋಳ, ಮಡ್ಡೆಪ್ಪ ತೋಳನವರ, ಡಿ ಎಮ್ ದಳವಾಯಿ, ಸುರೇಶ ಸನದಿ, ಹನುಮಂತ ದುರ್ಗನವರ, ಶೇಖರ ರಜಪೂತ, ಸುರೇಶ ಪತ್ತಾರ, ಮಾರುತಿ ಹಾಲುರ, ಖನ್ನಪ್ಪ ಗುಡದನ್ನವರ, ಬಸವರಾಜ ಉಜ್ಜನಕೊಪ್ಪ, ಬಡಾಕಪ್ಪ ಪೂಜೇರಿ, ಯಲ್ಲಪ್ಪ ಭಂಗಿ, ಧರೇಪ್ಪ ಮಗದುಮ, ಶಿವಾನಂದ ಕುಂದರಗಿ, ಮುನ್ನಾ ದೇಸಾಯಿ, ಆನಂದ ಅತ್ತಿಗೋಳ, ಅಭ್ಬಾಸ ದೇಸಾಯಿ, ನಾಗರಜ ಶೇಟ್ಟೆನ್ನವರ, ಕಿರಣ ಡಮಾಮಗಾರ, ಮಲ್ಲಿಕಜಾನ ತಳವಾರ, ಸಾವಂತ ತಳವಾರ, ಜ್ಯೋತಿಬಾ ಸುಭಂಜಿ, ಬಾಬು ಮುಳಗುಂದ, ಶ್ರೀಶೈಲ ಯಕ್ಕುಂಡಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ವೀರೇಂದ್ರ ಎಕ್ಕೇರಿಮಠ ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: