ಬೆಟಗೇರಿ:ಬಿಲಕುಂದಿ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿಗಳ ಉದ್ಘಾಟನೆ
ಬಿಲಕುಂದಿ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿಗಳ ಉದ್ಘಾಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಇ – ವಾರ್ತೆ, ಫೆ 26 :
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಂತೆ ಬಿಲಕುಂದಿ ಗ್ರಾಮ ಸೇರಿದಂತೆ ಗೋಸಬಾಳ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗ ಬಳಿಗಾರ ಹೇಳಿದರು.
ಸಮೀಪದ ಬಿಲಕುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲ್ಲಿ 2021-22 ನೇ ಸಾಲಿನ ನಬಾರ್ಡ ಆರ್‍ಐಡಿಎಫ್ 25ರ ಯೋಜನೆಯಡಿಯಲ್ಲಿ ನಿರ್ಮಿಸಿದ ನೂತನ ಮೂರು ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸ್ಥಳೀಯರಿಗೆ ಮೂಲಭೂತ ಸೌಲಭ್ಯಗಳನ್ನು ಸಕಾಲಕ್ಕೆ ಕಲ್ಪಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪಣ್ಣ ಕುರಬೇಟ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ.ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯೆ ನೀಲವ್ವ ಬಳಿಗಾರ, ಮೆಳವಂಕಿ ಜಿಪಂ ಮಾಜಿ ಸದಸ್ಯ ವಿಠಲ ಸವದತ್ತಿ ಜ್ಯೋತಿ ಬೆಳಗಿಸಿದರು. ಅತಿಥಿ, ಗಣ್ಯರನ್ನು ಶಾಲೆಯ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು.
ಬೆಟಗೇರಿ ಸಿಆರ್‍ಸಿ ಬಿ.ಟಿ.ಪುಂಜಿ, ಬಸಪ್ಪ ಕಪರಟ್ಟಿ, ಭೀಮಶೆಪ್ಪ ಹೊಸಟ್ಟಿ, ಬಸವರಾಜ ಸವದತ್ತಿ, ಪ್ರಕಾಶ ಜೊತೆನ್ನವರ, ಶವಾಜಿ ಬಳಿಗಾರ, ಮಹಾದೇವಿ ಹಿರೇಮಠ, ಯಲ್ಲವ್ವ ಮದಿಹಳ್ಳಿ, ಶಿಲ್ಪಾ ಕಳ್ಳಿಗುದ್ದಿ, ಬಸವರಾಜ ಸವದತ್ತಿ, ಎ.ಎಂ.ನರ್ಗಾಸಿ, ಟಿ.ಕೆ.ಟಕ್ಕಳಿ, ಕೆ.ಕೆ.ಐದಮನಿ, ಶ್ರೀಮತಿ ಅರ್ಚನಾ, ಶಾಲೆಯ ಶಿಕ್ಷಕರು, ಎಸ್‍ಡಿಎಮ್‍ಸಿ ಸದಸ್ಯರು, ಗಣ್ಯರು, ಸ್ಥಳೀಯರು ಇದ್ದರು.