RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ:ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ : ಮಾಜಿ ಸಚಿವ ಬಾಲಚಂದ್ರ 

ಸೋಮವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೂಡಲಗಿ ತಾಲೂಕು ರಚಿಸುವಂತೆ ಮನವಿ ಅರ್ಪಿಸಿದರು.

ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ಸೆ 25: ಮೂಡಲಗಿ ಹೊಸ ತಾಲೂಕಾ ರಚನೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, 15 ದಿನಗಳ ಒಳಗೆ ಮೂಡಲಗಿ ತಾಲೂಕಾಗಿ ಘೋಷಣೆಯಾಗುವುದು ನಿಶ್ಚಿತವೆಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಸೋಮವಾರದಂದು ಮುಂಜಾನೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕಾವೇರಿ ನಿವಾಸದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ತಾಲೂಕು ಘೋಷಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು.

ಮೂಡಲಗಿ ಪಟ್ಟಣವನ್ನು ಹೊಸ ತಾಲೂಕುಗಳ ಪಟ್ಟಿಯಲ್ಲಿ ಕೈ ಬಿಟ್ಟಿರುವುದರಿಂದ ಈ ಭಾಗದ ಸಾರ್ವಜನಿಕರ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ತೊಂದರೆಯಾಗಿದೆ. ಮೂಡಲಗಿ ತಾಲೂಕು ಕೇಂದ್ರವಾಗಲು ಟಿ.ಎಮ್.ಹುಂಡೆಕಾರ,ಎಮ್.ವಾಸುದೇವರಾವ, ಗದ್ದಿಗೌಡರ ಹಾಗೂ ಎಮ್.ಬಿ.ಪ್ರಕಾಶ ಅವರ ನೇತೃತ್ವದ ಆಯೋಗಗಳು ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದವು. 2013 ರಲ್ಲಿ ಜಗದೀಶ ಶೆಟ್ಟರ ಅವರ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ 2017ರಲ್ಲಿ ನೀವು (ಸಿಎಮ್ ಸಿದ್ದರಾಮಯ್ಯ) ಮಂಡಿಸಿದ ಬಜೆಟ್ ಸಂದರ್ಭದಲ್ಲಿ ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಿದ್ದಿರಿ. ಆದರೆ ಸೆ.6 ರಂದು 49ಹೊಸ ತಾಲೂಕಗಳ ರಚನೆಯ ಆದೇಶದಲ್ಲಿ ಮೂಡಲಗಿಯನ್ನು ಕೈ ಬಿಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನ್ಯಾಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸೆ. 18 ರಂದು ನಡೆಸಲಾದ ಸಭೆಯಲ್ಲಿ ಮೂಡಲಗಿಯನ್ನು ನೂತನ ತಾಲೂಕು ಕೇಂದ್ರವಾಗಲಿಕ್ಕೆ ಸರ್ವಾನುಮತದಿಂದ ನಿರ್ಣಯ ಅಂಗಿಕರಿಸಿದ್ದು, ಈಗಾಗಲೇ ಪ್ರಸ್ತಾವಣೆಯು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಮುಂದಿದೆ. ಮುಂಬರುವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕು ರಚನೆಯ ಸಂಬಂಧ ಪ್ರಸ್ತಾವಣೆಯನ್ನು ಮಂಡಿಸಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ ನೀಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಕೋರಿದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೂಡಲೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಈ ಕಡತವನ್ನು ಪರಿಶೀಲಿಸಿ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸೂಚನೆ ನೀಡಿದರು. ಅಲ್ಲದೇ ಮೂಡಲಗಿ ತಾಲೂಕು ರಚನೆ ಸಂಬಂಧ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರೆಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಮೂಡಲಗಿ ತಾಲೂಕಾವಾಗುವುದು ಶತಸಿದ್ದ. ಇನ್ನೆರಡು ದಿನಗಳಲ್ಲಿ ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮತ್ತೊಂದು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು. ಮುಂದಿನ 15 ದಿನಗಳಲ್ಲಿ ಮೂಡಲಗಿ ಹೊಸ ತಾಲೂಕು ರಚನೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಡಲಗಿ ತಾಲೂಕು ರಚನೆಗೆ ಉತ್ತಮ ಸ್ಪಂದನೆ ಮಾಡಿದ್ದಾರೆ. ಮೂಡಲಗಿ ಹೊಸ ತಾಲೂಕು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಮೂಡಲಗಿ ತಾಲೂಕು ರಚನೆ ಮಾಡುವುದೇ ನನ್ನ ಪ್ರಮುಖ ಗುರಿಯಾಗಿದ್ದು, ಮೂಡಲಗಿ ಭಾಗದ ಜನತೆ ಶಾಂತಿ ಕಾಪಾಡಬೇಕು. ಕೆಲವರು ನಮ್ಮ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಯಾವುದೇ ಊಹಾಪೋಹಗಳನ್ನು ನಂಬಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Related posts: