ಗೋಕಾಕ:ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿನ ಸಾಂಸ್ಕೃತಿಕ ಹಬ್ಬವಾಗಿ ಬೆಳೆದಿದೆ : ಶಾಸಕ ರಮೇಶ ಅಭಿಮತ
ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿನ ಸಾಂಸ್ಕೃತಿಕ ಹಬ್ಬವಾಗಿ ಬೆಳೆದಿದೆ : ಶಾಸಕ ರಮೇಶ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :
ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿನ ಸಾಂಸ್ಕೃತಿಕ ಹಬ್ಬವಾಗಿ ಬೆಳೆದಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾದಂದು ನಗರದ ಶರಣ ಸಂಸ್ಕೃತಿ ಉತ್ಸವ ಜರಗುವ ಶ್ರೀ ಚನ್ನಬಸವೇಶ್ವರ ವಿದ್ಯಾ ಪೀಠಕ್ಕೆ ಬೇಟಿನೀಡಿದ ಅವರು ಜನರಲ್ಲಿ ಧರ್ಮ ಜಾಗೃತಿಯನ್ನು ಉಂಟು ಮಾಡುತ್ತಾ ಈ ಉತ್ಸವವು ಭಾವೈಕತೆ ಪ್ರತಿಕವಾಗಿ ಹೋರಹೊಮ್ಮಿದೆ. ಇನ್ನೂ ಹೆಚ್ಚು ಹೆಚ್ಚು ಹೆಮ್ಮರವಾಗಿ ಬೆಳೆದು ರಾಜ್ಯ ಮಟ್ಟದ ಉತ್ಸವವಾಗಲಿ ಎಂದು ಶುಭ ಹಾರೈಸಿದರು.
ದಿನಾಂಕ 3 ರಂದು ಸಂಜೆ ಜರಗಲಿರುವ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷತೆಯನ್ನು ವಹಿಸಬೇಕಾಗಿತ್ತು ಕಾರಣಾಂತರಗಳಿಂದ ತುರ್ತು ಕಾರ್ಯ ನಿಮಿತ್ಯ ಬೇರೆಡೆ ಪ್ರಯಾಣ ಬೆಳೆಸಲಿರು ಶಾಸಕ ರಮೇಶ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದು ಉತ್ಸವಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಲಿಂಗಾಯತ ಮಹಿಳಾ ವೇದಿಕೆಯ ಸದಸ್ಯರು ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು ಶಾಸಕರನ್ನು ಸತ್ಕರಿಸಿ , ಗೌರವಿಸಿದರು.