ಗೋಕಾಕ:ಸಂಗೀತ ನಮ್ಮ ಸಂಸ್ಕೃತಿಯ ಭಾಗವಾಗಿ ಧಾರ್ಮಿಕ ಕಾರ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ : ಮಗದುಮ್ಮ
ಸಂಗೀತ ನಮ್ಮ ಸಂಸ್ಕೃತಿಯ ಭಾಗವಾಗಿ ಧಾರ್ಮಿಕ ಕಾರ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ : ಮಗದುಮ್ಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :
ಸಂಗೀತ ನಮ್ಮ ಸಂಸ್ಕೃತಿಯ ಭಾಗವಾಗಿ ಧಾರ್ಮಿಕ ಕಾರ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ಗೋಕಾಕ ತಾಲೂಕಾ ಘಟಕದಿಂದ ಪದ್ಮವಿಭೂಷಣ ಪಂಡಿತ ಪುಟ್ಟರಾಜು ಕವಿ ಗವಾಯಿಗಳ ಜಯಂತಿ ನಿಮಿತ್ತ ಹಮ್ಮಿಕೊಂಡ ಸಂಗೀತ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅನಾದಿ ಕಾಲದಿಂದಲೂ ಸಂಗೀತಕ್ಕೆ ಮಹತ್ವದ ಸ್ಥಾನ ಇದೆ. ಮಹಾತ್ಮರು ಸಂಗೀತದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿ ಸಮಾಜವನ್ನು ತಿದ್ದುವಂತಹ ಕಾರ್ಯಮಾಡಿದ್ದಾರೆ. ನಮ್ಮ ದೇಶಿಯ ಸಂಗೀತವನ್ನು ಉಳಿಸಿ ಬೆಳೆಸಿ ಮುಂದಿನ ಪಿಳಿಗೆಗೆ ಕೊಡುಗೆಯಾಗಿ ನೀಡಬೇಕು ಸಂಗೀತದ ಮಹತ್ವವನ್ನು ಹೆಚ್ಚಿಸಿ ಸಾವಿರಾರು ಕಲಾವಿದರನ್ನು ಹುಟ್ಟು ಹಾಕಿದ ಪಂಡಿತ ಪುಟ್ಟರಾಜು ಗವಾಯಿಗಳ ದಾರಿಯಲ್ಲಿ ನಾವೆಲ್ಲ ಸಾಗೋಣ ವೆಂದರು.
ಈ ಸಂದರ್ಭದಲ್ಲಿ ಆರವಿಂದ ಮಹಾಜನ್ , ಡಾ.ಅಶೋಕ ಜಿರಗ್ಯಾಳ, ಶ್ರೀಮತಿ ರಜನಿ ಜಿರಗ್ಯಾಳ, ಮಹಾಂತೇಶ ತಾವಂಶಿ, ಭಾರತಿ ಮದಬಾಂವಿ, ವಿರೇಂದ್ರ ಪತಕಿ, ವಿದ್ಯಾ ಮಗದುಮ್ಮ , ಶಶಿಕಲಾ ಶಿಂಧೆ ಹಾಗೂ ಕಲಾವಿದರಾದ ದಿನೇಶ್ ಜುಗಳಿ, ಮಲ್ಲಿಕಾರ್ಜುನ ವಕ್ಕುಂದ, ಗಿರಿಜಾ ಮಹಾಜನ್, ಅಶ್ವಿನಿ ಪತಕಿ, ಈಶ್ವರಚಂದ್ರ ಬೆಟಗೇರಿ ಇದ್ದರು.