RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ದಿನಾಂಕ 7 ರಂದು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ : ಡಾ.ಸಂಜಯ ಹೋಸಮಠ

ಗೋಕಾಕ:ದಿನಾಂಕ 7 ರಂದು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ : ಡಾ.ಸಂಜಯ ಹೋಸಮಠ 

ದಿನಾಂಕ 7 ರಂದು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ : ಡಾ.ಸಂಜಯ ಹೋಸಮಠ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :

 
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಫತ್ತಿನ ಸಂಘಗಳ ಮಹಾಮಂಡಳ ಮತ್ತು ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು ,ಮುಖ್ಯ ಕಾರ್ಯನಿರ್ವಾಹನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ದಿನಾಂಕ 7 ರಂದು ಮುಂಜಾನೆ 10 ಘಂಟೆಗೆ ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತನ ಸಂಘಗಳ ಮಹಾಮಂಡಳದ ನಿರ್ದೇಶಕ ಡಾ.ಸಂಜಯ ಹೋಸಮಠ ಹೇಳಿದರು

ಶುಕ್ರವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಾಗಾರವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜ್ಯೋತಿ ಬೆಳಗಿಸುವರು, ಅಧ್ಯಕ್ಷತೆಯನ್ನು ಸಹಕಾರ ಫತ್ತಿನ ಸಂಘಗಳ ಮಹಾಮಂಡಳಗಳ ಅಧ್ಯಕ್ಷೆ ಕೆ.ಲಲಿತಾ ಜಿ.ಟಿ.ದೇವೆಗೌಡ ವಹಿಸುವರು. ಮುಖ್ಯ ಅತಿಥಿಗಳಾಗಿ ಜಗದೀಶ್ ಕವಟಗಿಮಠ, ಕೆ.ಕೆ ಮಹೇಂದ್ರ ಪ್ರಸಾದಗೌಡ, ರಾಜೇಶ್ವರಿ ಮೆನನ್ , ಜಿ.ಎಂ ಪಾಟೀಲ್, ಕೆ.ಎಲ್.ಶ್ರೀನಿವಾಸ, ಶಾಹಿನ ಅಕ್ತಾರ ,ಬಿ.ಡಿ.ಪಾಟೀಲ, ಬಿ.ಎನ್.ಉಳ್ಳಾಗಡ್ಡಿ, ವರ್ಧಮಾನ ಗೋಳಿ, ಆಗಮಿಸಲಿದ್ದಾರೆ.

ಈ ಕಾರ್ಯಾಗಾರದಲ್ಲಿ ಸಿನಿಯರ್ ಸಬ್ ರಿಜಿಸ್ಟ್ರಾರ್ ವಿಷ್ಣು ತೀರ್ಥ , ಪೊಲೀಸ ಇನ್ಸಪೇಕ್ಟರ ವೀರೇಶ್ ದೊಡ್ಡಮನಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಎಸ್.ಜಿ..ಜೋಷಿ, ಲೆಕ್ಕ ಪರಿಶೋಧಕ ಅನಿಲ್ ಭರಧ್ವಾಜ ಹಾಗೂ ಆದಾಯ ತೆರಿಗೆ ಇಲಾಖೆಗಳಿಂದ ಉಪನ್ಯಾಸ ನೀಡುವರು.
ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ನಿರ್ವಾಹನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿ ಕಾರ್ಯಾಗಾರದ ಸದುಪಯೋಗ ಪಡೆಸಿಕೊಳ್ಳಬೇಕೆಂದು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರುಗಳಾದ ಉಮೇಶ ಬಾಳಿ ಹಾಗೂ ತಮ್ಮಣ್ಮ ಕೆಂಚರೆಡ್ಡಿ ಉಪಸ್ಥಿತರಿದ್ದರು.

Related posts: