RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮಹಿಳೆಯರು ಮನಸು ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ : ಸಂವಾದ ಕಾರ್ಯಕ್ರಮದಲ್ಲಿ ಡಾ.ಕಿರಣ ಬೇಡಿ ಅಭಿಮತ

ಗೋಕಾಕ:ಮಹಿಳೆಯರು ಮನಸು ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ : ಸಂವಾದ ಕಾರ್ಯಕ್ರಮದಲ್ಲಿ ಡಾ.ಕಿರಣ ಬೇಡಿ ಅಭಿಮತ 

ಮಹಿಳೆಯರು ಮನಸು ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ : ಸಂವಾದ ಕಾರ್ಯಕ್ರಮದಲ್ಲಿ ಡಾ.ಕಿರಣ ಬೇಡಿ ಅಭಿಮತ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :

 
ಮಹಿಳೆಯರು ಮನಸು ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ ಎಂದು ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಡಾ.ಕಿರಣ ಬೇಡಿ ಹೇಳಿದರು

ಶುಕ್ರವಾರದಂದು ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಲು ಗೋಕಾಕ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚನ್ನಬಸವೇಶ್ವರ ವಿದ್ಯಾಪೀಠದ ಬಿಸಿಇ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ದೃಢ ನಿರ್ಧಾರಗಳನ್ನು ಕೈಗೊಂಡು ತಾನು ಅಂದುಕೊಡಂತೆ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು. ಕ್ರೀಡೆಯಲ್ಲಿ ಪಾಲ್ಗೋಳುವಿಕೆಯು ವಿದ್ಯಾರ್ಥಿಗಳ ಮನಸಿನಲ್ಲಿ ಅಡಗಿರುವ ಹೆದರಿಕೆಯನ್ನು ಹೋಗಲಾಡಿಸುತ್ತದೆ. ಮಹಿಳೆ ಕ್ರೀಡೆಯಲ್ಲಿ ಆಸಕ್ತಿ ತೊರದಿದ್ಧರೆ ವಿದ್ಯಾರ್ಥಿ ಜೀವನದಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ.ವಿದ್ಯಾರ್ಥಿನೀಯರು ವಿದ್ಯಾರ್ಥಿ ಜೀವನದಲ್ಲಿ ಎಲ್ಲಾ ರಂಗಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಮುನ್ನುಗಬೇಕು. ಶಿಕ್ಷಕರು ಸಹ ಅಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವಲ್ಲಿ ವಿವಿಧ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು.
ಹಲವು ದೇಶಗಳಲ್ಲಿ ಇನ್ನೂ ಮಹಿಳೆಯರಿಗೆ ಸ್ತ್ರೀ ಸ್ವಾತಂತ್ರ್ಯ ಇಲ್ಲ, ಆದರೆ ನಮ್ಮ ದೇಶದ ಸಂವಿಧಾನವು ಎಲ್ಲರಿಗೂ ಸರಿ ಸಮಾನ ಸ್ವಾತಂತ್ರ್ಯ ಕೊಟ್ಟಿದೆ ಇದರ ಸದುಪಯೋಗ ಪಡೆದುಕೊಂಡು ಮಹಿಳೆಯರು ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕು. ವಿಜ್ಞಾನ , ಕ್ಯಾಮೆಸ್ಟರ್ರಿ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾರ್ಥಿನೀಯರು ಆಸಕ್ತಿ ಹೊಂದದೆ ಇರುವದರಿಂದ ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಆಗುತ್ತಿಲ್ಲ ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿನೀಗಳನ್ನು ಉತ್ತೇಜನ ನೀಡಿ ವಿಜ್ಞಾನ ವಿಷಯದಲ್ಲಿ ಓದವಂತೆ ಮಾರ್ಗದರ್ಶನ ಮಾಡಬೇಕು. ಹೊಸ ಅಭ್ಯಾಸ ನಿತಿಯ ಸದುಪಯೋಗ ಪಡೆದುಕೊಂಡು ಸಾಧಕರರಾಗಬೇಕು ಎಂದರು‌

ಕಾರ್ಯಕ್ರಮವನ್ನು ಶಿಕ್ಷಕಿ ಅರ್ಪನಾ ನಿರೂಪಿಸಿ ,ವಂದಿಸಿದರು . ಈ ಸಂದರ್ಭದಲ್ಲಿ ಚನ್ನಬಸವೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗವಿಮಠ ಇದ್ದರು

Related posts: