ಮೂಡಲಗಿ:10 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
10 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಮಾ 5 :
ರಸ್ತೆಗಳ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರದಂದು ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರದಲ್ಲಿ ಆರ್.ಡಿ.ಪಿ.ಆರ್ ಯೋಜನೆಯಡಿ 10ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿಗದಿತ ಅವಧಿಯೋಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.
ಮಾರ್ಚ ತಿಂಗಳ ಅಂತ್ಯದೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿ ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಭೆಟ್ಟಿ ನೀಡಿ ಕೆಲಸಗಳ ಗುಣಮಟ್ಟವನ್ನು ಪರಿಶೀಲಿಸಬೇಕು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡರೆ ರಸ್ತೆಗಳು ಹಾಳಾಗುವದಿಲ್ಲ, ಸಾರ್ವಜನಿಕ ಅನುಕೂಲಕ್ಕಾಗಿ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನವು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗಲಿದೆ, ಜೊತೆಗೆ ದೇವಸ್ಥಾನಗಳ ಜೀರ್ಣೋದಾರಕ್ಕಾಗಿ ಎರಡು ಕೋಟಿ ರೂ ಅನುದಾನ ಸಹ ಬರಲಿದೆ ಎಂದು ಹೇಳಿದರು.
ರಸ್ತೆ ಕಾಮಗಾರಿಗಳ ವಿವರ: ಮೂಡಲಗಿ ತಾಲೂಕಿನ ಹಳ್ಳೂರ ಗಾಂಧಿ ನಗರದಿಂದ ಬಸವನಗರ ರಸ್ತೆ ಸುಧಾರಣೆಗೆ 80 ಲಕ್ಷ ರೂಪಾಯಿ, ನಾಗನೂರ ನಿಪನಾಳ ರಸ್ತೆ ಸುಧಾರಣೆಗೆ 1.50 ಕೋಟಿ ರೂಪಾಯಿ, ಪಟಗುಂದಿಯಿಂದ ಮೂಡಲಗಿ-ಸುಣಧೋಳಿ ಮುಖ್ಯ ರಸ್ತೆ ಸುಧಾರಣೆಗೆ 1.20 ಕೋಟಿ ರೂಪಾಯಿ, ಕಮಲದಿನ್ನಿ ಗ್ರಾಮದಿಂದ ಮೂಡಲಗಿ-ಸುಣಧೋಳಿ ಮುಖ್ಯ ರಸ್ಥೆ ಸುಧಾರಣೆಗೆ 80 ಲಕ್ಷ ರೂಪಾಯಿ, ಹೊನಕುಪ್ಪಿಯಿಂದ ಬಿಲಕುಂದಿ ರಸ್ತೆ ಸುಧಾರಣೆಗೆ 90 ಲಕ್ಷ ರೂ, ಹುಣಶ್ಯಾಳ ಪಿ.ಜಿ ಹಳೇ ಗ್ರಾಮದಿಂದ ಹೊಸ ಗ್ರಾಮದ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಬಿಲಕುಂದಿ-ಗೊಸಬಾಳ ರಸ್ತೆ ಸುಧಾರಣೆಗೆ 1.20 ಕೋಟಿ ರೂ, ಕೌಜಲಗಿ-ರಡೇರಹಟ್ಟಿ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಕಲಾರಕೊಪ್ಪ ಗ್ರಾಮದಿಂದ ದಂಡಿನ ಮಾರ್ಗ ಕೂಡು ರಸ್ತೆಗೆ 80 ಲಕ್ಷ ರೂ, ರಡ್ಡೇರಹಟ್ಟಿ-ಯಾದವಾಡ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಮನ್ನಿಕೇರಿಯಿಂದ ಮಳ್ಳಿಕೇರಿ ರಸ್ತೆ ಸುಧಾರಣೆಗೆ 80 ಲಕ್ಷ ರೂ ಸೇರಿದಂತೆ ಒಟ್ಟು 10 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಹಳ್ಳುರ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಸ್.ಸಂತಿ, ಬಿ.ಜಿ.ಸಂತಿ, ಭೀಮಶಿ ಮಗದುಮ್, ಹನಮಂತ ತೇರದಾಳ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಅಡಿವೇಪ್ಪ ಪಾಲಬಾಂವಿ, ಮಲ್ಲಪ್ಪ ಚಬ್ಬಿ, ಸುರೇಶ ಡಬ್ಬನ್ನವರ, ಲಕ್ಷ್ಮಣ ಛಭ್ಭಿ, ಶಂಕರ ಬೊಳನ್ನವರ, ಸುರೇಶ ಕತ್ತಿ, ಕುಮಾರ ಲೋಕನ್ನವರ, ಶ್ರೀಶೈಲ್ ಬಾಗೋಡಿ, ಬಸಪ್ಪ ನಾವಿ, ಶಿವಪ್ಪ ಅಟ್ಟಮಟ್ಟಿ, ಪ್ರಕಾಶ ಕೊಂಗಾಲಿ, ಶ್ರೀಶೈಲ್ ಅಂಗಡಿ, ಸದಾಶಿವ ಮಾವರಕರ, ಬಿ.ಕೆ.ಗಂಗರಡ್ಡಿ, ಹಳ್ಳೂರ ಗ್ರಾ.ಪಂ ಸದಸ್ಯರು ಮತ್ತಿತರರು ಇದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಆರ್.ಡಿ.ಪಿ.ಆರ್ ಯೋಜನೆಯಡಿ ಬಿಡುಗಡೆಯಾದ ಹತ್ತು ಕೋಟಿ ರೂಪಾಯಿ ವೆಚ್ಚದ ರಸ್ತೆಗಳ ಕಾಮಗಾರಿಗೆ ಹಳ್ಳೂರ ಗಾಂಧಿ ನಗರದಲ್ಲಿ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶನಿವಾರದಂದು ಭೂಮಿ ಪೂಜೆ ನೆರವೇರಿಸಿದರು, ಈ ಸಂಧರ್ಭದಲ್ಲಿ ಲಕ್ಷ್ಮಣ ಕತ್ತಿ, ಬಿ.ಎಸ್.ಸಂತಿ, ಬಿ.ಜಿ.ಸಂತಿ, ಹನಮಂತ ತೇರದಾಳ, ಭೀಮಶಿ ಮಗದುಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.